

ಭುವನೇಶ್ವರ: ದಕ್ಷಿಣ ಒಡಿಶಾದ ಮಲ್ಕನ್ಗಿರಿಯಲ್ಲಿ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಿಂದ ಮನೆಗೆ ಹಿಂದಿರುಗುತ್ತಿದ್ದ 15ರ ಶಾಲಾ ಬಾಲಕಿಯನ್ನು ಮೂವರು ಪುರುಷರು ಅಪಹರಿಸಿ, ಭಾನುವಾರ ಸಂಜೆ ಅತ್ಯಾಚಾರ(Gang rape) ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆಘಾತಕ್ಕೊಳಗಾದ ಬಾಲಕಿ ಮನೆಗೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾಗ, ಬಿಜಘಾಟಿಯ ಮಲ್ಕನ್ಗಿರಿ-ಜೆಪೋರ್ ಹೆದ್ದಾರಿಯಲ್ಲಿ ಟ್ರಕ್ ಚಾಲಕನೊಬ್ಬ ಅವಳನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೊನೆಗೆ ಕೆಲವು ಸ್ಥಳೀಯ ಜನರು ಅವಳನ್ನು ರಕ್ಷಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಟ್ರಕ್ ಚಾಲಕ ಸೇರಿದಂತೆ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)