ಉತ್ತರಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್​ರೇಪ್​; 72ರ ವೃದ್ಧನೂ ಅತ್ಯಾಚಾರಿ!?

gangrape
Published on

ಬುಲಂದ್​ಷಹರ್​: ಹಾಥರಸ್​ ಗ್ಯಾಂಗ್​ರೇಪ್ ಪ್ರಕರಣ ಕಾವೇರಿರುವ ನಡುವೆಯೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್​ರೇಪ್​ ಪ್ರಕರಣದ ಬಹಿರಂಗಗೊಂಡಿದೆ. ಈ ಬಗ್ಗೆ ಸಂತ್ರಸ್ತೆ ವಾಟ್ಸ್​ಆ್ಯಪ್​ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.

ಹದಿನಾರು ವರ್ಷದ ಬಾಲಕಿ ನೀಡಿರುವ ದೂರಿನ ಮೇರೆಗೆ, ಆಕೆಯ ಮನೆಗೆ ತೆರಳಿ ಹೇಳಿಕೆ ಪಡೆದ ಪೊಲೀಸರು, 72 ವರ್ಷದ ವೃದ್ಧ ಸೇರಿ ಮೂವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ತನ್ನ ಮೇಲೆ ಕಳೆದ ಒಂದೂವರೆ ವರ್ಷದಲ್ಲಿ ಹಲವು ಬಾರಿ ಅತ್ಯಾಚಾರ ನಡೆದಿದೆ. 72 ವರ್ಷದ ಶ್ರೀಚಂದ್​, ಆತನ ತಮ್ಮ 52 ವರ್ಷದ ಬಲ್​ವೀರ್ ಹಾಗೂ ಹಾಲು ಮಾರುವ ಮಹೇಶ್​ ಎಂಬಾತ ತನ್ನ ಮೇಲೆ ಪದೇಪದೆ ಅತ್ಯಾಚಾರ ಎಸಗಿದ್ದಾಗಿ ಬಾಲಕಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಒಂದೂವರೆ ವರ್ಷಗಳ ಹಿಂದೆ ಬಾಲಕಿಯ ಸೋದರನಿಗೆ ಗಂಭೀರ ಅಪಘಾತವಾಗಿತ್ತು. ಆಗ ಬಾಲಕಿಯ ಕುಟುಂಬಕ್ಕೆ ಬಲ್​ವೀರ್​ 1.5 ಲಕ್ಷ ರೂ. ಸಾಲ ಕೊಟ್ಟಿದ್ದ. ಅದನ್ನು ತೀರಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಗಲಾಟೆ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net