ತೌಸಿರ್‌-ಬಾಸಿತ್‌ ಗ್ಯಾಂಗ್‌ನ 8 ಮಂದಿಯ ಸೆರೆ

WhatsApp Image 2021-04-12 at 12.48.34 PM (1)
Published on

ಮಂಗಳೂರು: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಹೆದ್ದಾರಿ ದರೋಡೆ ಮಾಡಲು ಸಜ್ಜಾಗಿದ್ದ ೮ ಮಂದಿಯ ಟೀಬಿ ಗ್ರೂಪ್‌ ಗ್ಯಾಂಗನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ಕರೊನಾ ಕರ್ಫ್ಯು ವೇಳೆ ವಿಶೇಷ ಬಂದೋಬಸ್ತ್‌ನಲ್ಲಿ ಇರುವ ವೇಳೆ ಉಳಾಯಿ ಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ರಸ್ತೆ ಬದಿ ನಿಂತು ಆರೋಪಿಗಳು ಮಾರಕಾಯುಧಗಳೊಂದಿಗೆ ರಸ್ತೆಯಲ್ಲಿ ಹಾದು ಹೋಗುವ ವಾಹನಗಳನ್ನು ತಡೆದು ನಿಲ್ಲಿಸುವ ಪ್ರಯತ್ನದಲ್ಲಿದ್ದರು.
ಮಾರ್ನಮಿಕಟ್ಟೆಯ ತೌಸಿರ್‌ ಅಲಿಯಾಸ್‌ ಪತ್ತೋಂಜಿ ತೌಸಿರ್(೨೮), ಫರಂಗಿಪೇಟೆ ಅರ್ಕುಳದ ಮೊಹಮ್ಮದ್‌ ಅರಾಫತ್‌ ಅಲಿಯಾಸ್‌ ಅರಫಾ(೨೯), ಫರಂಗಿಪೇಟೆ ಅಮ್ಮೆಮಾರ್‌ನ ತಸ್ಲಿಂ(೨೭), ತುಂಬೆಹೌಸ್‌ನ ನಾಸಿರ್‌ಹುಸೈನ್‌(೨೯), ಪುದು ಗ್ರಾಂದ ೧೦ನೇ ಮೈಲ್‌ನ ಮೊಹಮ್ಮದ್‌ ರಫೀಕ್‌(೩೭), ಮೊಹಮ್ಮದ್‌ ಸಫ್ನಾನ್‌(೨೫), ಅಮ್ಮೆಮಾರ್‌ನ ಮೊಹಮ್ಮದ್‌ ಜೈನುದ್ದೀನ್‌(೨೪), ಉನೈಝ್‌(೨೬) ಬಂಧಿತರು.
ಇವರಿಂದ ಚೂರಿ, ತಲವಾರು, ಡ್ರಾಗನ್‌ ಚೂರಿ, ಮೆಣಸಿನ ಹುಡಿ, ಇನ್ನೋವಾ ಕಾರು ಇತ್ಯಾದಿ ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗನ್ನು ವಿದೇಶದಲ್ಲಿರುವ ಬಾಸಿತ್‌ ಹಾಗೂ ಬಂಧಿತನಾಗಿರುವ ಪತ್ತೋಂಜಿ ತೌಸಿರ್‌ ಸೇರಿ ನಡೆಸುತ್ತಿದ್ದು ತೌಸಿಫ್‌ ಬಾಸಿತ್‌ ಗ್ಯಾಂಗ್(ಟಿಬಿ)‌ ಎಂದು ಹೆಸರೂ ಇರಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net