ಗಣೇಶೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ ಅ. 5ರಂದು

4-RNR-01
Published on

ರಾಣೆಬೆನ್ನೂರ: ಇಲ್ಲಿಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಮುನ್ಸಿಪಲ್​ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ 16ನೇ ವರ್ಷದ ರಾಣೆಬೆನ್ನೂರ ಕಾ ರಾಜಾ ಗಣಪತಿ ಉತ್ಸವದ ನಿಮಿತ್ತ ಅ. 5ರಂದು ಧರ್ಮಸಭೆ ಹಾಗೂ ಮಹಿಳಾ ಜಾಗೃತಿ ಸಭೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10 ಗಂಟೆಯಿಂದ ರಕ್ತದಾನ ಶಿಬಿರ, ನೇತ್ರದಾನ ಹಾಗೂ ದೇಹದಾನ ನೋಂದಣಿ ಜರುಗಲಿದೆ. 11 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಧರ್ಮಸಭೆ ಹಾಗೂ ಮಹಿಳಾ ಜಾಗೃತಿ ಸಭೆ ಜರುಗಲಿದ್ದು, ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹಾಗೂ ಸ್ಥಳಿಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್​ ಸಾನ್ನಿಧ್ಯ ವಹಿಸುವರು.
ವಿಶ್ವ ಹಿಂದು ಪರಿಷತ್​ನ ರಾಷ್ಟ್ರೀಯ ಜಂಟಿ ಕಾರ್ಯದಶಿರ್ ಹಾಗೂ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲಜಿ ನಾಗರಕಟ್ಟೆ, ಪ್ರಗತಿಪರ ಕೃಷಿ ಸಾಧಕಿ ಕವಿತಾ ಮಿಶ್ರಾ ಹಾಗೂ ಸಂಸತಿಕ ವಿಶ್ವ ವಿದ್ಯಾಲಯದ ಕುಲ ಸಚಿವ ವಿಶ್ವನಾಥ ಹಿರೇಮಠ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಭೆಯಲ್ಲಿ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಬರೆದಿರುವ ವಿವೇಕಧಾರಾ ಕೃತಿ ಲೋಕಾರ್ಪಣೆ ಮಾಡಲಾಗುವುದು. ರಾಣೆಬೆನ್ನೂರ ಕಾ ರಾಜಾ ಕೊಬ್ಬರಿ ಹೋರಿಯ ಅಲ್ಬಮ್​ ಸಾಂಗ್​ ಬಿಡುಗಡೆಗೊಳಿಸಲಾಗುವುದು.
ನಂತರ ಚಂದನ್​ ಶೆಟ್ಟಿ ಮತ್ತು ತಂಡದವರಿಂದ ಹಾಸ್ಯ ಮತ್ತು ಸಂಗೀತ ಸಂಜೆ, ನೃತ್ಯ ಸೇರಿ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net