ಆರೋಗ್ಯ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರ ಸೆ. 8ರಂದು

5-RNR-03 basavaraj hullatti
Published on

ರಾಣೆಬೆನ್ನೂರ: ತಾಲೂಕಿನ ಮೇಡ್ಲೇರಿ ಗ್ರಾಮದ ಶ್ರೀ ಗಜಾನನ ಯುವಕ ಮಂಡಳಿ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ 26ನೇ ಶ್ರೀ ಗಜಾನನ ಉತ್ಸವ ನಿಮಿತ್ತ ಸೆ. 8ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಗ್ರಾಮದ ಮಾರುತಿ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ಸದಸ್ಯ ಬಸವರಾಜ ಹುಲ್ಲತ್ತಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ಯೋಗ ಸಂಬಂಧಿ ತೊಂದರೆ, ಕೀಲು ಮೂಳೆ ಸಮಸ್ಯೆ, ಸ್ತ್ರೀರೋಗ, ಕ್ಯಾನ್ಸರ್​ ಸೇರಿ ಯಾವುದೇ ರೋಗದ ಕುರಿತು ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ರೋಗಿಗಳ ಪ್ರಯಾಣ, ಊಟ ವಸತಿ ಕೂಡ ಉಚಿತವಾಗಿರಲಿದೆ ಎಂದರು.
ಎಸ್​.ಸಿ. ಬೆಂಗಳೂರು ಆಸ್ಪತ್ರೆಯ ಡಾ. ಗಿರೀಶ ಕೆಂಚಪ್ಪನವರ, ಗಜಾನನ ಯುವಕ ಮಂಡಳಿಯ ಗೌರವಾಧ್ಯಕ್ಷ ಶಿವರಾಜ ಮುಂಡಾಸದ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪ್ರಮುಖರಾದ ಡಾ. ಗಿರೀಶ ಕೆಂಚಪ್ಪನವರ, ಜ್ಯೋತಿ ತಳವಾರ, ಪುಟ್ಟಪ್ಪ ತಳವಾರ, ಗಣೇಶ ಹುಲ್ಲತ್ತಿ, ನಿಂಗಪ್ಪ ಹೊನ್ನತ್ತಿ, ಮಂಜು ದೂಪದ, ಈರಣ್ಣ ಮುಂಡಾಸದ, ಗುಡ್ಡಪ್ಪ ಹೊನ್ನತ್ತಿ, ಸುರೇಶ ನಾಯ್ಕರ, ಬಸಣ್ಣ ಕರೇಗೌಡ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net