ಡಿಜೆ ಬಳಸಿದವರ ವಿರುದ್ಧ ದಾಖಲಾಯ್ತು ಪ್ರಕರಣ

Crime Logo
Published on

ಹಾವೇರಿ: ಗಣೇಶ ಮೂತಿರ್ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಡಿಜೆ ಬಳಕೆ ಮಾಡಿದ ಆರೋಪದಡಿ ಜಿಲ್ಲೆಯಲ್ಲಿ ಪ್ರಥಮ ಎಫ್​ಐಆರ್​ ದಾಖಲಾಗಿದೆ.

ನಗರದ ಸುಭಾಸ ಸರ್ಕಲ್​ನ ಶ್ರೀ ಗಜಾನನ ಉತ್ಸವ ಸಮಿತಿ ಹಾಗೂ ಹುಂಡಿ ಡಿಜೆ ಸೌಂಡ್​ ಸಿಸ್ಟಂ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿರುವುದು.

ಇವರ ವಿರುದ್ಧ ಶಹರ ಠಾಣೆ ಪಿಎಸ್​ಐ ಎನ್​.ಎನ್​. ಶಿಶುವಿನಹಾಳ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರು ಗಣೇಶ ಮೂತಿರ್ ಮೆರವಣಿಗೆ ಸಮಯದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ಡಿಜೆ ಹಚ್ಚಿದ್ದಾರೆ. ಇದರ ಮೂಲಕ ಮೆರವಣಿಗೆ ಮಾಡಿ ಸಾರ್ವಜನಿಕರ ಶಾಂತತೆಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net