

ರಾಣೆಬೆನ್ನೂರ: ನಗರದ ಕೆಇಬಿ ವಿನಾಯಕ ದೇವಸ್ಥಾನದಲ್ಲಿ ಗಜಾನನೋತ್ಸವದ ಅಂಗವಾಗಿ ಸೆ. 7ರಿಂದ 11ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ. 7ರಂದು ಬೆಳಗ್ಗೆ 10.30ಕ್ಕೆ ಮೆರವಣಿಗೆ ಮೂಲಕ ಶ್ರೀ ಗಜಾನನ ಮೂತಿರ್ಯ ಪ್ರತಿಷ್ಠಾಪನೆ. 8ರಂದು ಬೆಳಗ್ಗೆ 10ಕ್ಕೆ ಹಾಗೂ ಸಂಜೆ 7ಕ್ಕೆ ಮಹಾಪೂಜೆ, 9ರಂದು ಬೆಳಗ್ಗೆ 10ಕ್ಕೆ ಹಾಗೂ ಸಂಜೆ 7ಕ್ಕೆ ಮಹಾಪೂಜೆ, ನಂತರ ಇಳಕಲ್ಲದ ರಂಗಸಂಗಮ ಕಲೆ ಮತ್ತು ಸಾಂಸತಿಕ ಸಂದ ವತಿಯಿಂದ ಹಳ್ಳಿ ಹುಡಗಿ ಮೊಸರ ಗಡಗಿ ನಾಟಕ ಪ್ರದರ್ಶನವಾಗಲಿದೆ. 10ರಂದು ಬೆಳಗ್ಗೆ 10ಕ್ಕೆ ದೇವಸ್ಥಾನದ ವಾಷಿರ್ಕೋತ್ಸವ ಪ್ರಯುಕ್ತ ಗಣಹೋಮ ಮತ್ತು ನವಗ್ರಹ ಹೋಮ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಗಜಾನನ ಮೂತಿರ್ಯ ಮೆರವಣಿಗೆ ನಡೆಯುವುದು ಎಂದು ಗಜಾನನ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.