ಗಾಂಧೀಜಿ ಚಿತ್ರ 1.76 ಕೋಟಿ ರೂಪಾಯಿಗೆ ಮಾರಾಟ

7-6877ebd1c6988
Published on

ಲಂಡನ್: ಗಾಂಧೀಜಿಯವರ ಅಪರೂಪದ ತೈಲವರ್ಣ ಚಿತ್ರ ಲಂಡನ್​ನಲ್ಲಿ ನಡೆದ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. 1931ರಲ್ಲಿ ಗಾಂಧೀಜಿ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಲಂಡನ್​ಗೆ ಭೇಟಿ ನೀಡಿದ್ದರು. ಈ ವೇಳೆ ಕಲಾವಿದ ಕ್ಲೇರ್ ಲೈಟನ್ ಗಾಂಧೀಜಿಯ ಚಿತ್ರವನ್ನು ರಚಿಸಿದ್ದರು. ಗಾಂಧಿ ಕಲಾವಿದರೆದುರು ಕುಳಿತು ರಚಿಸಿದ ಏಕೈಕ ತೈಲವರ್ಣ ಚಿತ್ರ ಇದಾಗಿದೆ. ಇದು ಬಹಳ ವಿಶೇಷವಾದ ಕಲಾಕೃತಿಯಾಗಿದೆ. ಈ ಕಲಾಕೃತಿಯನ್ನು 50 ರಿಂದ 70 ಸಾವಿರ ಪೌಂಡ್ಸ್ ಮೂಲಬೆಲೆ ನಿರ್ಧರಿಸಲಾಗಿತ್ತು, ಆದರೆ ಮಂಗಳವಾರ ಮುಕ್ತಾಯವಾದ ಹರಾಜಿನಲ್ಲಿ ಈ ಕಲಾಕೃತಿ 1,52,800 ಪೌಂಡ್ಸ್ (1.76 ಕೋಟಿ ರೂ.)ಗೆ ಹರಾಜಾಗಿದೆ ಎಂದು ಬೋನ್​ಹ್ಯಾಮ್ಸ್​ ಹರಾಜು ಕೇಂದ್ರದ ಮುಖ್ಯಸ್ಥೆ ರೈನಾನ್ ಡೆಮೆರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net