ಗಾಂಧೀಜಿಯವರ ಸರಳತೆ ಅಳವಡಿಸಿಕೊಳ್ಳಿ; ಬಿ.ಪಿ. ಶಿಡೇನೂರ

2-RNR-05
Published on

ರಾಣೆಬೆನ್ನೂರ: ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಸಹಾನುಭೂತಿಯ ಮನೋಭಾವ, ಶಾಸ್ತ್ರೀಜಿಯವರ ಸರಳತೆ ಮತ್ತು ದಿಟ್ಟ ನಿರ್ಧಾರಗಳು ಮನುಕುಲಕ್ಕೆ ಸ್ಪೂತಿರ್ ನೀಡುತ್ತವೆ. ಇಂಥ ಸಂದೇಶಗಳು ಸರ್ವಕಾಲಕ್ಕೂ ಸತ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಂಡಾಗ ಮಾತ್ರ ಮಹಾತ್ಮರ ಆಚರಣೆಗೆ ಅರ್ಥರ್ಪೂಣವಾಗುತ್ತದೆ ಎಂದು ಮುಖ್ಯಶಿಕ್ಷಕ ಬಿ.ಪಿ. ಶಿಡೇನೂರ ಹೇಳಿದರು.
ಇಲ್ಲಿಯ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್​ ಬಹದ್ದೂರ್​ ಶಾಸ್ತ್ರಿಜೀ ಯುವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್​ಡಿಎಂಸಿ ಅಧ್ಯಕ್ಷ ಆನಂದ ಚಿನ್ನಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿಯರಾದ ಪ್ರತಿಭಾ ಕಳ್ಳಿಮಠ, ರ್ಪೂಣಿಮಾ ನೆಗಳೂರಮಠ, ಶ್ವೇತಾ ಎಚ್​.ವಿ., ಆರ್​.ಬಿ. ಚಲವಾದಿ, ವನಜಾಕ್ಷಿ ಪಾಟೀಲ, ಕೆ. ಎಸ್​. ಮ್ಯಾಗೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net