ದತ್ತ ಜಯಂತಿ ನಿಮಿತ್ತ ಗಣಹೋಮ

skp Dharmika (1)
ಶ್ರೀ ದತ್ತ ಜಯಂತಿ ಪ್ರಯಕ್ತ ಶಿಕಾರಿಪುರದ ಶ್ರೀ ದತ್ತಕೇವಲಾನಂದ ಆಶ್ರಮದಲ್ಲಿ ಹೋಮ ಹವನ ನೆರವೇರಿತು.
Published on

ಶಿಕಾರಿಪುರ: ದತ್ತ ಜಯಂತಿ ಪ್ರಯುಕ್ತ ಶಿಕಾರಿಪುರದ ಶ್ರೀ ದತ್ತಕೇವಲಾನಂದ ಆಶ್ರಮದಲ್ಲಿ ದೈನಂದಿನ ಪೂಜಾ ವಿಧಿ ವಿಧಾನಗಳು, ಪುಣ್ಯಾಹ, ಗಣಹೋಮ, ನವಗ್ರಹಶಾಂತಿ ನಡೆಯಿತು. ಶ್ರೀ ದತ್ತಕೇವಲಾನಂದ ಟ್ರಸ್ಟ್ ಅಧ್ಯಕ್ಷ ರವೀಂದ್ರ ಗುರೂಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಡಿ.14ರವರೆಗೆ ನಡೆಯಲಿವೆ. ಮಂಗಳವಾರ ಬೆಳಗ್ಗೆ ಶ್ರೀ ಲಕ್ಷ್ಮೀನರಸಿಂಹ ಹೋಮ, ಸಂಜೆ ಪಾಲಕಿ ಸೇವಾ ಮತ್ತು ಸಾಂಪ್ರದಾಯಿಕ ಪೂಜೆ ವಿಧಿ ವಿಧಾನಗಳು ನಡೆದವು. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ವಸಂತಮಾಧವ, ದಿವಾಕರ್ ದೀಕ್ಷಿತ್, ತಡಗಣಿ ರಾಘವೇಂದ್ರ ಇತರರಿದ್ದರು. ಋತ್ವಿಜರಾದ ಶಿವು ಭಟ್, ಅಂಜನ್ ಭಟ್, ನರಸಿಂಹ ಜೋಯ್ಸ, ಪ್ರದೀಪ್ ಕುಲಕರ್ಣಿ, ಗಣಪತಿ ಭಟ್ ನೇತೃತ್ವದಲ್ಲಿ ಹೋಮ ಹವನಗಳು ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net