

ನವದೆಹಲಿ: ಸದ್ಯ ಕರೊನಾ ಡೆಲ್ಟಾ ಎಲ್ಲೆಡೆ ಆತಂಕ ಸೃಷ್ಟಿಸಿರುವ ಬೆನ್ನಿಗೆ ಕೋವಿಡ್ ವೈರಸ್ನ ಮತ್ತೊಂದು ವೇರಿಯಂಟ್ ಈಗ ಕರೊನಾ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಹೊಸದಾಗಿ ಕಂಡು ಬಂದಿರುವ ಗಾಮಾ ವೇರಿಯಂಟ್ ವ್ಯಾಪಿಸಲಾರಂಭಿಸಿರುವುದೇ ಈ ಭೀತಿಗೆ ಕಾರಣ.
ರಷ್ಯಾದಲ್ಲಿ ಈಗಾಗಲೇ ಡೆಲ್ಟಾ ವ್ಯಾಪಿಸಿದ್ದು, ಈಗ ಅಲ್ಲಲ್ಲಿ ಗಾಮಾ ವೇರಿಯಂಟ್ ಕೂಡ ಕಂಡುಬರಲಾರಂಭಿಸಿದೆ ಎಂಬುದನ್ನು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ರಷ್ಯಾದಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿರುವ ಬೆನ್ನಿಗೇ ಹೊಸ ವೇರಿಯಂಟ್ ಪತ್ತೆ ಆತಂಕ ಮೂಡಿಸಿದೆ.
ಈ ಗಾಮಾ ವೇರಿಯಂಟ್ ಮೊದಲಿಗೆ ಬ್ರೆಜಿಲ್ನಲ್ಲಿ ಕಾಣಿಸಿಕೊಂಡಿತ್ತು. ಅದು ಈಗ ರಷ್ಯಾದ ಹಲವೆಡೆ ಕಾಣಿಸಿಕೊಂಡು ವ್ಯಾಪಿಸುತ್ತಿದೆ. ಮುಂದೆ ಇದು ಇತರ ದೇಶಗಳಲ್ಲೂ ಕಾಣಿಸಿಕೊಂಡೀತು. ಅಲ್ಲದೆ ಇವರು ಬೇಗ ಹರಡುವ ಜೊತೆಗೆ ಪ್ರತಿಕಾಯಗಳ ಪರಿಣಾಮವನ್ನು ತಗ್ಗಿಸುವ ಸಾಮರ್ಥ್ಯವನ್ನೂ ಹೊಂದಿವೆ ಎನ್ನಲಾಗಿರುವುದರಿಂದ ಆತಂಕ ಕೂಡ ಕಾಡುತ್ತಿದೆ. (ಏಜೆನ್ಸೀಸ್)