ಗೇಮ್​ ಚೇಂಚರ್​ ಸಿನಿಮಾ ನನಗೆ ಪೂರ್ಣ ತೃಪ್ತಿ ನೀಡಿಲ್ಲ; ಹೀಗ್ಯಾಕಂದ್ರು ನಿರ್ದೇಶಕ ಶಂಕರ್​? | Game Changer

dk (13)
Published on

ತಮಿಳುನಾಡು: ದಕ್ಷಿಣ ಭಾರತ ಖ್ಯಾತಿಯ ಹಲವು ದಿಗ್ಗಜ ನಿರ್ದೇಶಕರಲ್ಲಿ ತಮಿಳಿ ಶಂಕರ್​ ಒಬ್ಬರು. ತಾವೇ ನಿರ್ದೇಶನ ಮಾಡಿರುವ ರಾಮ್​ ಚರಣ್​ ಮತ್ತು ಕಿಯಾರ ಅಡ್ವಾಣಿ ನಟಿಸಿರುವ ಗೇಮ್​ ಚೇಂಚರ್(Game Changer)​ ಸಿನಿಮಾ ನನಗೆ ತೃಪ್ತಿ ನೀಡಲಿಲ್ಲ ಎಂದು ಶಂಕರ್​ ಸಂದರ್ಶನವೊಂದರಲ್ಲಿ ಹೇಳಿ ಎಲ್ಲರಿಗೂ ಆಚ್ಚರಿ ಮೂಡಿಸಿದ್ದಾರೆ.

ಗೇಮ್​ ಚೇಂಚರ್​ ಸಿನಿಮಾ ಇದೇ ಜ.10ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಆದರೆ, ಸಿನಿ ರಸಿಕರ ನಕರತ್ಮಾಕ(ನೆಗಟಿವ್​) ವಿಮರ್ಶೆ ಹಿನ್ನೆಲೆ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂದು ಚಿತ್ರತಂಡದ ಬೇಸರ. ಇದರ ನಡುವೇ ನಿರ್ದೇಶಕ ಶಂಕರ್​ ಸಂದರ್ಶನವೊಂದರಲ್ಲಿ ತಮ್ಮದೇ ಸಿನಿಮಾದ ಬಗ್ಗೆ ಅಂಸತೃಪ್ತಿ ವ್ಯಕ್ತಪಡಿಸಿದ್ದಾರೆ.

ಶಂಕರ್​ ಹೇಳಿದ್ದೇನು?

ಗೇಮ್​ ಚೇಂಚರ್​​​ ಸಿನಿಮಾದಿಂದ ನನಗೆ ತೃಪ್ತಿ ಇಲ್ಲ. ನಾನು ಸಿನಿಮಾ ಇನ್ನು ಚೆನ್ನಾಗಿ ಮಾಡಬಹುದಿತ್ತು. ಆದರೆ, ಸಮಯದ ಅಭಾವದಿಂದ ಒಳ್ಳೆ ದೃಶ್ಯಗಳನ್ನು ಚಿತ್ರದಲ್ಲಿ ಕಟ್​ ಮಾಡಲಾಗಿದೆ. ಒಳ್ಳೆಯ ಸಿನಿಮಾವಾಗಲಿದೆ ಎಂಬ ಭರವಸೆ ಇತ್ತು. ಆದರೆ, ಜನರಿಗೆ ಇಷ್ಟವಾಗಿಲ್ಲ. ಹೀಗಾಗಿ, ಈ ಸಿನಿಮಾದಿಂದ ನಾನು ಸಂಪೂರ್ಣ ತೃಪ್ತಿ ಹೊಂದಿಲ್ಲ ಎಂದು ಶಂಕರ್​ ಒಪ್ಪಿಕೊಂಡಿದ್ದಾರೆ.

ಶಂಕರ್​ ತಮಿಳಿನ ಖ್ಯಾತ ನಿರ್ದೇಶಕರು. ರೋಬೊ, ರೋಬೊ 2.0, ಇಂಡಿಯನ್​, ಭಾಗ-1,2 ಮತ್ತು ಅನ್ನಿಯಾನ್​ ಸೇರಿದಂತೆ ಇತರ ಇವರ ಚಿತ್ರಗಳು ಭಾರತ ಚಿತ್ರರಂಗದಲ್ಲಿ ಅವರ ಹೆಸರನ್ನು ಖ್ಯಾತಿಗಳಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net