

ಮುಂಬೈ: ( Gal Gadot ) ಹಾಲಿವುಡ್ ನಟಿ ಗಾಲ್ ಗಡೋಲ್ ನಾಲ್ಕನೇ ಬಾರಿ ಅಮ್ಮನಾಗಿ ಈ ಹಿಂದೆಯೇ ಅಭಿಮಾನಿಗಳಿಗೆ ಅಚ್ಚರಿ ಹುಟ್ಟಿಸಿದ್ರು. ಈಗ ಈಕೆ ತಮ್ಮ ಹೆರಿಗೆ ಮತ್ತು ಪ್ರೆಗ್ನೆನ್ಸಿ ಸಮಯದಲ್ಲಿ ಕಾಡಿದ ರೋಗದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ 38 ವರ್ಷದ ಗಾಲ್ ಗಡೋಟ್, ಮಾರ್ಚ್ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಎದೆಗವಚಿಕೊಂಡ ಫೋಟೋ ಹಾಕಿದ್ದ ಗಾಲ್ ಗಡೋಟ್, ನಾಲ್ಕನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ, ಪ್ರಗ್ನೆನ್ಸಿ ಸುಲಭವಾಗಿರಲಿಲ್ಲ ಎಂದು ಶೀರ್ಷಿಕೆ ಹಾಕಿದ್ದರು. ಮಗಳಿಗೆ ಹಾಲುಣಿಸುವ ಫೋಟೋ ಪೋಸ್ಟ್ ಮಾಡಿದ್ದಾರೆ.
ಈ ವರ್ಷ ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೇನೆ. ನಾಲ್ಕನೇ ಮಗುವಿನ ಗರ್ಭಾವಸ್ಥೆಯಲ್ಲಿ ದೊಡ್ಡ ಸವಾಲನ್ನು ನಾನು ಎದುರಿಸಿದ್ದೇನೆ. ನನ್ನ ಗರ್ಭಧಾರಣೆಯ ಎಂಟನೇ ತಿಂಗಳಿನಲ್ಲಿ, ನನ್ನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಇರುವುದು ಪತ್ತೆಯಾಯಿತು. ವಾರಗಳವರೆಗೆ, ನಾನು ಹಾಸಿಗೆಯಲ್ಲಿಯೇ ಮಲಗಬೇಕಾಯ್ತು. ಅಸಹನೀಯ ತಲೆನೋವು ನನ್ನನ್ನು ಕಾಡಿತ್ತು. ಎಂಆರ್ ಐ ಸ್ಕ್ಯಾನ್ ಮಾಡಲಾಯ್ತು. ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಭಯದ ಆ ಕ್ಷಣದಲ್ಲಿ ನನ್ನ ಮಗಳು ಜನಿಸಿದ್ದಳು. ಮಗಳಿಗೆ ಗಾಲ್ ಓರಿ ಎಂದು ನಾಮಕರಣ ,ಆಡಿದ್ದೇವೆ. ತನ್ನ ಮಗು, ವೈದ್ಯರು ಹಾಗೂ ಕುಟುಂಬಸ್ಥರಿಗೆ ಧನ್ಯವಾದ. ಇಂದು ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಮತ್ತೆ ಹೊಸ ಜೀವನ ಶುರು ಮಾಡಿದ್ದು, ಎಲ್ಲರಿಗೂ ಧನ್ಯವಾದ. ಈ ಪ್ರಯಾಣ ನನಗೆ ಸಾಕಷ್ಟು ಕಲಿಸಿದೆ.30 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 100,000 ಗರ್ಭಿಣಿ ಮಹಿಳೆಯರಲ್ಲಿ 3 ಜನರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೋಗ ಕಾಡುತ್ತದೆ ಎಂದು ಗಾಲ್ ಬರೆದಿದ್ದಾರೆ.
ಸಾರಾ ಅರ್ಫೀನ್ ಖಾನ್ ಇಸ್ರೇಲಿ ಚಲನಚಿತ್ರ ನಿರ್ಮಾಪಕ ಜರೋನ್ ವರ್ಸಾನೊ ಅವರನ್ನು ಗಾಲ್ ಗಡೋಟ್ ಮದುವೆಯಾಗಿದ್ದಾರೆ. ಅವರು ಈಗ ನಾಲ್ಕು ಹೆಣ್ಣು ಮಕ್ಕಳ ತಾಯಿ. ಈಕೆ ಪ್ರೆಗ್ನಿನ್ಸಿ ಸಮಯದಲ್ಲಿ ಯಾವೆಲ್ಲ ಸಮಸ್ಯೆ ಕಾಡಿತ್ತು ಎಂಬುದನ್ನು ಗಾಲ್ ಗಡೋಲ್ ವಿವರಿಸಿದ್ದಾರೆ.