

ಉತ್ತರ ಪ್ರದೇಶ: 'ಗದರ್ 2' ಚಿತ್ರದಲ್ಲಿ ಸನ್ನಿ ಡಿಯೋಲ್ ಪುತ್ರ 'ಜೀತೆ' ಪಾತ್ರವನ್ನು ನಿರ್ವಹಿಸಿದ ನಟ ಉತ್ಕರ್ಷ್ ಶರ್ಮಾ ಭಾನುವಾರ ತಡರಾತ್ರಿ ಆಗ್ರಾದ ಚಿತ್ರಮಂದಿರವನ್ನು ತಲುಪಿದರು. ಚಿತ್ರ ನೋಡುವುದರಲ್ಲಿ ಮಗ್ನರಾಗಿದ್ದ 'ಗದರ್ 2' ಪ್ರೇಕ್ಷಕರು ತಮ್ಮ ಮಧ್ಯೆ ಚಿತ್ರದ ನಾಯಕ ಉತ್ಕರ್ಷನನ್ನು ಕಂಡು ಫುಲ್ ಖುಷ್ ಆದರು. ಪ್ರೇಕ್ಷಕರ ಮೊಗದಲ್ಲಿ ಸಂತಸ ಮೂಡಿತ್ತು. ತಮ್ಮ ಮಧ್ಯೆ ಉತ್ಕರ್ಷ್ ನನ್ನು ನೋಡಿದ ಸಭಿಕರು 'ಭಾರತ್ ಮಾತಾ ಕೀ ಜೈ' ಮತ್ತು 'ಹಿಂದೂಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದರು.
ಸದ್ಯ ಪ್ರೇಮಕಥೆಯನ್ನಾಧರಿಸಿದ 'ಗದರ್' ಭಾಗ 2 ಕೂಡ ಸೂಪರ್ ಹಿಟ್ ಆಗಿದೆ. ಚಿತ್ರ ಬಿಡುಗಡೆಯಾಗಿ 10 ದಿನ ಕಳೆದರೂ ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕ್ ಆಗುತ್ತಲೇ ಇದೆ. ಜನ ಬ್ಲಾಕ್ನಲ್ಲಿ ಸಹ ಟಿಕೆಟ್ ಖರೀದಿಸಲು ಮುಂದಾಗಿದ್ದಾರೆ.
ಶೋ ಮಧ್ಯದಲ್ಲಿ ಉತ್ಕರ್ಷ್
'ಗದರ್ 2' ನಿರ್ದೇಶಕ ಅನಿಲ್ ಶರ್ಮಾ ಮತ್ತು ನಟ ಉತ್ಕರ್ಷ್ ಶರ್ಮಾ ಅವರು ಹರಿಯಲಿ ತೀಜ್ ದಿನದಂದು ಬಂಕೆ ಬಿಹಾರಿಯನ್ನು ತಲುಪಿದರು. ಬಳಿಕ ಭಾನುವಾರ ಆಗ್ರಾದ ವಿಜಯನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಇಲ್ಲಿ ಅವರು ಸ್ವಲ್ಪ ಸಮಯ ಉಳಿದು ನಂತರ ಸಂಜಯ್ ಪ್ಲೇಸ್‌ನಲ್ಲಿರುವ ಗೋಲ್ಡ್ ಮಲ್ಟಿಪ್ಲೆಕ್ಸ್ ಅನ್ನು ತಲುಪಿದರು. ಮಲ್ಟಿಪ್ಲೆಕ್ಸ್ ನಲ್ಲಿ ಗದರ್ 2 ಶೋ ನಡೆಯುತ್ತಿತ್ತು. ಸ್ವಲ್ಪ ಸಮಯದವರೆಗೆ ಲೈಟ್ ಆಫ್ ಮಾಡಲಾಗಿದೆ. ಆದರೆ ಲೈಟ್ ಆನ್ ಆದಾಗ ಜನರು ತಮ್ಮ ಮಧ್ಯದಲ್ಲಿ ಗದರ್ 2 ನಟ 'ಜೀತೆ'ಯನ್ನು ನೋಡುತ್ತಾರೆ. ಶೋ ಮಧ್ಯದಲ್ಲಿ ಉತ್ಕರ್ಷ್ ಅವರನ್ನು ನೋಡಿ ಪ್ರೇಕ್ಷಕರು ತುಂಬಾ ಉತ್ಸುಕರಾಗಿ, ಸಂತಸ ವ್ಯಕ್ತಪಡಿಸಿದರು.
ನಾನು ಬ್ಲಾಕ್ ಟಿಕೆಟ್ ತೆಗೆದುಕೊಂಡೆ
ಉತ್ಕರ್ಷ್ ಶರ್ಮಾ ಚಿತ್ರಮಂದಿರದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿ ಚಿತ್ರ ವೀಕ್ಷಿಸುತ್ತಿರುವ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಪ್ರೇಕ್ಷಕರು ಚಿತ್ರ ಚೆನ್ನಾಗಿದೆ ಎಂದು ಹೇಳಿದರೂ ಟಿಕೆಟ್ ಸಿಗುವುದು ಕಷ್ಟ ಎಂದು ದೂರಿದರು. ಬ್ಲಾಕ್ನಲ್ಲಿ ತೆಗೆದುಕೊಳ್ಳಬೇಕು ಎಂದರು. ಈ ವೇಳೆ ಉತ್ಕರ್ಷ್ ಶರ್ಮಾ ನಗುತ್ತಾ, ಬ್ಲಾಕ್ನಲ್ಲಿ ಟಿಕೆಟ್ ನೀಡುತ್ತಿರುವುದು ಗೊತ್ತಿದೆ. ನನಗೂ ಟಿಕೆಟ್ ಸಿಗಲಿಲ್ಲ. ನಾನು ಬ್ಲಾಕ್ ಟಿಕೆಟ್‌ನೊಂದಿಗೆ ಚಿತ್ರವನ್ನೂ ನೋಡಿದೆ ಎಂದಾಗ ಎಲ್ಲರೂ ನಕ್ಕರು.
ಸಿನಿಮಾ ಹಾಲ್‌ನಲ್ಲಿ, ಉತ್ಕರ್ಷ್ ಶರ್ಮಾ ಪ್ರೇಕ್ಷಕರಿಗೆ ಒಮ್ಮೆ ಎಲ್ಲರೂ ನನ್ನೊಂದಿಗೆ ಭಾರತ್ ಮಾತಾ ಕೀ ಜೈ ಹೇಳಿ ಎಂದರು. ಆಗ ಎಲ್ಲರೂ ನಟನ ಜೊತೆ ಹಿಂದೂಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಗದರ್ 3 ಕೂಡ ಬರಲಿದೆಯೇ ಎಂದು ವೀಕ್ಷಕರೊಬ್ಬರು ಪ್ರಶ್ನಿಸಿದರು. ನಟರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಜಮಾಯಿಸಿದ್ದರಿಂದ ಅವರು ಸುಮಾರು 15 ನಿಮಿಷಗಳ ಕಾಲ ಚಿತ್ರಮಂದಿರದಲ್ಲಿಯೇ ಇದ್ದರು.