

ಮುಂಬೈ: ಆಗಸ್ಟ್ 11 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಮಾಸ್, ಆಕ್ಷನ್ ಚಿತ್ರ 'ಗದರ್ 2' ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಾಣುವ ಮೂಲಕ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದೊಂದಿಗೆ ಭಾರೀ ಪೈಪೋಟಿ ನೀಡಿತ್ತು.
ಇದರೊಟ್ಟಿಗೆ ಬಾಲಿವುಡ್ ಸೇರಿದಂತೆ ಕೆಲ ಸಿನಿಮಾಗಳ ಹಿಂದಿನ ದಾಖಲೆಗಳನ್ನು ಮುರಿದು ಹೊಸ ರೆಕಾರ್ಡ್ ನಿರ್ಮಿಸಿತ್ತು. ಆದ್ರೆ, ಇದೀಗ 'ಜವಾನ್' ರಿಲೀಸ್ನಿಂದ 'ಗದರ್ 2' ಕಲೆಕ್ಷನ್ಗೆ ಭಾರೀ ಹೊಡೆತ ಬಿದ್ದಂತಾಗಿದೆ.
ಈ ಹಿಂದೆ ಬಾಲಿವುಡ್ ಅಂಗಳದಲ್ಲಿ ಕಿಂಗ್ ಖಾನ್ ನಟನೆಯ 'ಪಠಾಣ್' ಚಿತ್ರವು ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂ. ಮೊತ್ತವನ್ನು ವೇಗವಾಗಿ ಗಳಿಸಿದ ಹಿಂದಿ ಚಲನಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಈ ಮೂಲಕ ದಾಖಲೆಯನ್ನು ನಿರ್ಮಿಸಿತ್ತು. ಆದ್ರೆ, ಇತ್ತೀಚೆಗಷ್ಟೇ ಸನ್ನಿ ಡಿಯೋಲ್ ಅಭಿನಯದ 'ಗದರ್ 2 ಈ ರೆಕಾರ್ಡ್ ಅನ್ನು ಹಿಂದಿಕ್ಕುವಲ್ಲಿ ಮುಂಚೂಣಿಯಲ್ಲಿದೆ.
ಪಠಾಣ್ ಗಳಿಕೆಯನ್ನು ಮುರಿದ 'ಗದರ್ 2' ಇಂದು 510 ಕೋಟಿ ರೂ. ಗಳಿಕೆಯನ್ನು ಕಂಡಿದ್ದು, ಇಂದಿಗೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೋಡುತ್ತಿದೆ. ಈ ಚಿತ್ರಕ್ಕೆ ಶಾರೂಖ್ ನಟನೆಯ 'ಜವಾನ್' ಬಿಡುಗಡೆ ಇದೀಗ ಭಾರೀ ಪೈಪೋಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಜವಾನ್ ಗಲ್ಲಾಪೆಟ್ಟಿಗೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).