

ಯಾವುದೇ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡಿತು ಎಂದರೆ ಅದು ನಿಜಕ್ಕೂ ದೊಡ್ಡ ವಿಚಾರವೇ ಸರಿ. ಮೊದಲೆರಡು ದಿನ ಹೌಸ್ಫುಲ್ ಪ್ರದರ್ಶನದ ಬಳಿಕ ಸಿನಿಮಾಗೆ ಹಾಕಿದ ದುಡ್ಡನ್ನೇ ಗಳಿಕೆ ಮಾಡಲು ಒದ್ದಾಡಿದ ಅನೇಕ ಸಿನಿಮಾಗಳಿವೆ. ಆದರೆ, ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ ಹೊರತಾಗಿದೆ.
ಬಿಡುಗಡೆಯಾದ ಐದು ದಿನಗಳಲ್ಲಿ ಈ ಚಿತ್ರ ಬರೋಬ್ಬರಿ 229 ಕೋಟಿ ಕಲೆಕ್ಷನ್ ಮಾಡಿದೆ. ಸನ್ನಿ ಡಿಯೋಲ್ ವೃತ್ತಿ ಜೀವನದಲ್ಲಿ ಈ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಆಗಸ್ಟ್ 11 ನೇ ತಾರೀಕಿನಂದು 'ಗದರ್-2' ಸಿನಿಮಾ ರಿಲೀಸ್ ಆಗಿದ್ದು, ಶುಕ್ರವಾರದ ಕಲೆಕ್ಷನ್ 40.10 ಕೋಟಿ. ಶನಿವಾರ 43.08 ಕೋಟಿ ರೂಪಾಯಿ, ಭಾನುವಾರ 51.70 ಕೋಟಿ ರೂಪಾಯಿ, ವಾರದ ದಿನವಾದ ಸೋಮವಾರ 38.70 ಕೋಟಿ ರೂಪಾಯಿ ಗಳಿಸಿತು.
ಆಗಸ್ಟ್ 15ರ ಪ್ರಯುಕ್ತ ಮಂಗಳವಾರ ಈ ಚಿತ್ರ 55.40 ಕೋಟಿ ರೂಪಾಯಿ ಗಳಿಸಿ ಸನ್ನಿ ಡಿಯೋಲ್ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲನ್ನ ಸೃಷ್ಟಿಸಿದೆ.
ರಜಾ ಇರುವುದರಿಂದ ಸಿನಿಮಾಗೆ ಹೆಚ್ಚು ಕಲೆಕ್ಷನ್ ಆಗಿದೆ.
‘ಗದರ್ 2’ ಚಿತ್ರಕ್ಕೆ ಲಾಂಗ್ ವೀಕೆಂಡ್ ಸಹಕಾರಿ ಆಗಿದೆ. ಸಿನಿಮಾ ರಿಲೀಸ್ ಆದಾಗಿನಿಂದ 2 ವೀಕೆಂಡ್ಗಳ ಬಳಿಕ ಇದೀಗ ಸಿನಿಮಾದ ಗಳಿಕೆ 300 ಕೋಟಿ ರುಪಾಯಿ ದಾಟಿದೆ.
ಭಾರತ ಮತ್ತು ಪಾಕ್ ನಡುವಿನ ಗಲಾಟೆ ದ್ವೇಷದ ವಿಚಾರವಾಗಿ ‘ಗದರ್ 2’ ಸಿನಿಮಾದಲ್ಲಿ ಹೈಲೈಟ್ ಮಾಡಲಾಗಿದೆ. ಸಾಕಷ್ಟು ಆ್ಯಕ್ಷನ್ ದೃಶ್ಯಗಳು, ಮಾಸ್ ಡೈಲಾಗ್ ಸಿನಿಮಾದಲ್ಲಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ.