ಶರಣರ ತತ್ವ ಚಿಂತನೆಗಳು ಮಾನವನ ಬದುಕಿಗೆ ಬೆಳಕಾಗಿವೆ: ಶಿವಪ್ಪ ಕುರಿ

31GDG04
Published on

ವಿಜಯವಾಣಿ ಸುದ್ದಿಜಾಲ ಗದಗ

ಹನ್ನರಡನೇ ಶತಮಾನವು ಬಸವಾದಿ ಪ್ರಮಥರ ಕಾಲವಾದೆ. ಇಡೀ ಮನುಕುಲಕ್ಕೆ ಸಮಾನತೆ, ಸೋದರತೆ, ಪ್ರೀತಿ ಹಾಗೂ ನಡೆ ನುಡಿಗಳನ್ನು ಸಾರಿ ಹೇಳಿದ ಕಾಲವದು. ಬಸವಣ್ಣ ಹಾಗೂ ಸಮಕಾಲೀನ ವಚನಕಾರರು ತಾವು ಬಾಳಿದಂತೆ ನುಡಿದರು ಮತ್ತು ನುಡಿದಂತೆ ನಡೆದರು ಎಂದು ಗದಗ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯ ಶಿವಪ್ಪ ಕುರಿ ಹೇಳಿದರು.

ಗದಗ ನಗರದ ಒಕ್ಕಲಗೇರಿಯ ಮಹಾಮನೆಯಲ್ಲಿ ಯುಗಾದಿ ಪಾಡ್ಯ ಭಾನುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಂಗಳದಲ್ಲಿ "ವಚನರಥ ಶರಣಪಥ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಲಮ ಪ್ರಭುಗಳ ವಚನ ಹಾಗೂ ಬಸವಾದಿ ಶರಣರ ವಚನಗಳ ಮಹತ್ವ ಕುರಿತು ಉಪನ್ಯಾಸ ನೀಡಿದರು. ಶತ ಶತಮಾನಗಳವರೆಗೆ ಅಚ್ಚಳಿಯದ ಅನುಭಾವವನ್ನು ತಮ್ಮ ವಚನಗಳ ರೂಪದಲ್ಲಿ ನಮಗೆ ನೀಡಿದರು. ನಿತ್ಯದ ಬದುಕಿನಲ್ಲಿ ವಚನಗಳನ್ನು ಪಾಲಿಸಿದರೆ ಬದುಕು ಹಸನಾಗುತ್ತದೆ ಎಮದು ಕುರಿ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾನತನಾಡಿದ ತೋಮಟದಾರ್ಯ ಮಠದ ಕಾರ್ಯದಶಿರ್ ಶಿವಾನಂದ ಪಟ್ಟಣಶೆಟ್ಟಿ, ಕರ್ನಾಟಕವು ಜಗತ್ತಿಗೆ ಮೊಟ್ಟ ಮೊದಲ ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದೆ. ಬಸವಣ್ಣ ಹೊಸ ಧರ್ಮದ ಉದಯಕ್ಕೆ ಕಾರಣವಾದರೆ ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭುಗಳು ಎಲ್ಲ ಶರಣರಿಗೆ ಮಾರ್ಗದಶಿರ್ ಆಗಿದ್ದರು ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್​. ಎಸ್​. ಬುರುಡಿ ಮಾತನಾಡಿ, ಶರಣರ ತತ್ವಾದರ್ಶಗಳು ನಮಗೆಲ್ಲ ದಾರಿದೀಪವಾಗಿವೆ. ಇವುಗಳ ಆಚರಣೆಯಿಂದ ಸಮಾನತೆಯ ಮತ್ತು ಬಂಧುತ್ವದ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.

ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಕೆ. ಎ. ಬಳಿಗೇರ ಮಾತನಾಡಿ, ಶರಣರ ಹಲವಾರು ವಚನಗಳನ್ನು ಪ್ರಸ್ತಾಪಿಸಿದರು. ಎ. ವಿ. ಪ್ರಭು, ಶಾಂತಲಾ ಹಂಚಿನಾಳ, ಡಿ. ಎಸ್​. ಬಾಪುರಿ, ಎಂ. ಎಚ್​. ಹಿರೇಮಠ, ವಿಜಯಕುಮಾರ, ಎಂ. ಕೆ. ಲಮಾಣಿ, ಸುಲೋಚನಾ ಐಹೊಳೆ, ಡಿ. ಕೆ. ನಿಂಬನಗಾಡ್ರ, ಎ. ಎಚ್​.ಪಾಟೀಲ, ಪ್ರಕಾಶ ಮಂಗಳೂರ, ಸತೀಶ ಚೆನಪ್ಪಗೌಡ್ರ, ವೀರೇಶ ಬದಾಮಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net