

ಗದಗ: ಗದಗ ವಿಧಾನಸಭಾ ೇತ್ರ ಕಳಸಾಪೂರ, ನಾಗಾವಿ, ಹೊಸಳ್ಳಿ, ಕುರ್ತಕೋಟಿ ಲವತ್ತಾದ ಕೃಷಿ ಭೂಮಿಗಳಲ್ಲಿ ಹೆಗ್ಗಿಲ್ಲದೆ ರಾಜಾರೋಷವಾಗಿ, ಕಾನೂನು ಬಾಹಿರವಾಗಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದೆ. ಅಕ್ರಮ ಗಣಿಗಾರಿಕೆ ನಡೆಸುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಟಕ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಅಕ್ರಮ ಗಣಿಗಾರಿಕೆಯಿಂದ ಗ್ರಾಮದ ರೈತರ ಜಮೀನುಗಳು ಹಾಳಾಗುತ್ತಿವೆ. ಗ್ರಾಮದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ದೂಳು ಬರುವುದರಿಂದ ಆರೋಗ್ಯದ ಮೇಲೆ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಅಧಿಕಾರಿಗಳ ಶಾಮೀಲು ಇರುವ ಶಂಕೆ ಇದೆ. ಈ ಅಕ್ರಮ ಮಣ್ಣು ಗಣಿಗಾರಿಕೆಯನ್ನು ಕೂಡಲೆ ಸ್ಥಗಿತಗೊಳಿಸಿ 4 ಗ್ರಾಮಗಳ ಗ್ರಾಮಸ್ತರ ಆರೋಗ್ಯವನ್ನು ಕಾಪಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯ ಬೂದಪ್ಪ ಹಳ್ಳಿ, ಎಂ. ಎಸ್. ಕರೀಗೌಡ್ರ, ಬಿ. ಎಸ್. ಚಿಂಚಲಿ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದಶಿರ್ ಸುಭಾಸ ಸುಂಕದ, ಮಂಜುನಾಥ ಹಳ್ಳೂರಮಠ, ಪ್ರಮುಖರಾದ ಶರಣಪ್ಪ ಚಿಂಚಲಿ, ಡಿ. ಬಿ. ಕರೀಗೌಡ್ರ, ಮಹಾಂತೇಶ ತಿರ್ಲಾಪೂರ, ಅರವಿಂದ ಅಣ್ಣಿಗೇರಿ ಇತರರು ಇದ್ದರು.