

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳು ಭವಿಷ್ಯತ್ತಿನ ರೂವಾರಿಗಳು. ಮಗುವಿನ ಆಸೆ, ಆಕಾಂಗಳಿಗೆ ಕುಟುಂಬದಲ್ಲಿ ಗೌರವ ಹಾಗೂ ಪ್ರೋತ್ಸಾಹ ಜೊತೆಗೆ ಉತ್ತಮ ಮಾರ್ಗದರ್ಶನ ಇರಬೇಕೆ ಹೊರತು ತಮ್ಮ ಅಭಿಪ್ರಾಯಗಳನ್ನು ಹೇರಬಾರದ ಎಂದು ಚಿಂತಕಿ ಕವಿತಾ ದಂಡಿನ ಹೇಳಿದರು.
ನಗರದ ರೋಟರಿ ಕ್ಲಬ್ ನಲ್ಲಿ ಮಂಗಳವಾರ ರೋಟರಿ ಕಮ್ಯೂನಿಟಿ ಕೇರ್ ಸೆಂಟರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ಮೌಲ್ಯ ಶಿಣದ ಮಹತ್ವತೆ ಕುರಿತು ಮಾತನಾಡಿದ ಅವರು, ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವ ಅವಶ್ಯಕತೆಯು ಅನಿವಾರ್ಯವಾಗಿದೆ. ಮಾನವೀಯತೆ, ಹಿರಿಯರಿಗೆ ಗೌರವ, ನಮ್ಮ ಸಂಸತಿ, ಹಬ್ಬ ಹರಿದಿನಗಳ ಮಹತ್ವ, ರಾಷ್ಟ್ರಾಭಿಮಾನ, ಐಕ್ಯತೆ ಹಾಗೂ ಸಹಕಾರದಂತಹ ಮಹತ್ವರ್ಪೂಣ ಸಾಮಾಜಿಕ, ಧಾಮಿರ್ಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬೆಳದರೆ ಭವಿಷ್ಯತ್ತಿನಲ್ಲಿ ಆ ಮಗು ಒಬ್ಬ ಮಹಾನ್ ವ್ಯಕ್ತಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಡಾ. ರೇವಣಸಿದ್ಧೇಶ್ವರ ಉಪ್ಪಿನ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಲ್ಯಗಳು ನಮ್ಮ ಬದುಕಿನ ದಾರಿ ದೀಪಗಳು. ಮುಖ್ಯವಾಗಿ ಮಕ್ಕಳು ಹಾಗೂ ಯುವಕರಲ್ಲಿ ಮೌಲ್ಯಗಳನ್ನು ಗಟ್ಟಿ ಗೊಳಿಸುವ ಕಾರ್ಯ ನಡೆಯಬೇಕಿದೆ. ಜೊತೆಗೆ ಪ್ರವಾಸಗಳು ನಮಗೆ ಹೊಸ ಅನುಭವ ನೀಡುತ್ತವೆ ಎಂದರು.
ಉದ್ಯಮಿ ಚನ್ನವಿರಪ್ಪ ಹುಣಸೀಕಟ್ಟಿ ಮಾತನಾಡಿದರು. ವೀಣಾ ತಿರ್ಲಾಪೂರ, ಅತಾ ಶೆಟ್ಟಿ, ಮಹಾಂತೇಶ ಬಾತಾಖಾನಿ, ರಾಜಶೇಖರ ಬಳ್ಳಾರಿ, ಶ್ರೀಧರ ಸುಲ್ತಾನಪೂರ, ಬಾಲಕೃಷ್ಣ ಕಾಮತ, ವಿಶ್ವನಾಥ ಯಳಮಲಿ, ಸಂತೋಷ ಅಕ್ಕಿ, ಶಿವಾಚಾರ್ಯ ಹೊಸಳ್ಳಿಮಠ, ಡಾ. ಶೇಖರ ಸಜ್ಜನರ, ರಾಜಶೇಖರ ಬಳ್ಳಾರಿ, ಕಮಲಾ ಅಂಗಡಿ, ಮಹೇಶ ಬಾತಾಖಾನಿ, ಚಂದ್ರಮೌಳಿ ಜಾಲಿ, ಆರ್. ಕೆ. ಗಚ್ಚಿನಮಠ ಇತರರು ಇದ್ದರು.