

ಗದಗ: ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಾಲ್ಯಾವಸ್ಥೆಯಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಅವುಗಳನ್ನು ಲೆಕ್ಕಿಸದೇ ಜೀವನದಲ್ಲಿ ದಿಟ್ಟತನ, ಛಲ, ಹಟ, ಪ್ರಯತ್ನ ಹೋರಾಟಗಳ ಮೂಲಕ ಹಲವಾರು ಪದವಿಗಳನ್ನು ಪಡೆದು ಪದವಿಗಳ ಸರದಾರ ಎಂದೆನಿಸಿ ಸ್ವಾರ್ಥಕ್ಕಾಗಿ ಜೀವಿಸದೇ ನಿಸ್ವಾರ್ಥ ಪ್ರವೃತ್ತಿಯನ್ನು ಅಳವಡಿಸಿಕೊಂಡು ಸರ್ವಧರ್ಮ ದವರಿಗೆ ನ್ಯಾಯ ಒದಗಿಸುವುದಕ್ಕಾಗಿ ನಮ್ಮ ಭಾರತಕ್ಕೆ ಸಂವಿಧಾನ ರಚಿಸಿದ ಹೆಗ್ಗಳಿಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇಂದಿನ ಸಮಾಜಕ್ಕೆ ಯುವಕರಿಗೆ, ಇವರ ಆದರ್ಶ ತತ್ವಗಳು ಮಾದರಿಯಾಗಿವೆ ಎಂದು ಪ್ರಾಚಾರ್ಯ ಬಿ.ಬಿ.ಪಾಟೀಲರು ತಿಳಿಸಿದರು.
ಅವರು ಸ್ಥಳೀಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಬಿ.ಅರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ನಮನಗಳನ್ನು ಸಲ್ಲಿಸದರು.