ಗದಗ: ಜನ ವಸತಿ ಪ್ರದೇಶದಲ್ಲಿ ಎರಡನೇ ಹಂತದ ಹಕ್ಕು ಪತ್ರ ವಿತರಣೆ ಪ್ರಕ್ರಿಯೆ ಆರಂಭ

IMG-20250504-WA0018
Published on
  • 2025 ರಲ್ಲಿ 1226 ಕುಟುಂಬಗಳು ಅರ್ಹ ! 2023ರಲ್ಲಿ 2404 ಕುಟುಂಬಗಳಿಗೆ ವಿತರಣೆ

ಶಿವಾನಂದ ಹಿರೇಮಠ ಗದಗ ಕಂದಾಯ ಗ್ರಾಮಗಳಾಗಿರದೇ, ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿಕೊಂಡ ಜನ ವಸತಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಮನೆ ಹಕ್ಕು ಪತ್ರ ನೀಡುವ ಎರಡನೇ ಹಂತದ ಪ್ರಕ್ರಿಯೆಗೆ ರಾಜ್ಯಾದ್ಯಂತ ಚಾಲನೆ ದೊರೆತಿದೆ. ಇದರ ಭಾಗವಾಗಿ ಜಿಲ್ಲೆಯಲ್ಲೂ ಎರಡನೇ ಹಂತದಲ್ಲಿ 1226 ಮನೆಗಳನ್ನು (ಕುಟುಂಬ) ಗುರುತಿಸಲಾಗಿದೆ. ಈ ಹಿಂದೆ 2023ರಲ್ಲಿ 2404 ಮನೆಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸಲಾಗಿತ್ತು. ಪ್ರಸಕ್ತಸಾಲಿನಲ್ಲಿ ಕಂದಾಯ, ಪಂಚಾಯತರಾಜ್​, ನೋಂದಣಿ ಇಲಾಖೆ ಸಹಯೋಗದಲ್ಲಿ 1226 ಮನೆಗಳಿಗೆ ಹಕ್ಕು ಪತ್ರ ನೀಡುವ ಕಾರ್ಯ ನಡೆಸಲಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ 1226 ಮನೆ:

ಜಿಲ್ಲಾಡಳೀತ 2023ಕ್ಕೂ ಮೊದಲೇ ಜಿಲ್ಲೆಯಲ್ಲಿ 30 ಜನವಸತಿಗಳನ್ನು ಗುರುತಿಸಿತ್ತು. ಈ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವತಿರ್ಸಲು ಮತ್ತು ಹಕ್ಕುಪತ್ರ ವಿತರಿಸಲು 2023ರಲ್ಲಿ ಚಾಲನೆ ನೀಡಿತ್ತು. ಅದರಂತೆ ಈಗಾಗಲೇ 2404 ಮನೆಗಳನ್ನು ಗ್ರಾಮಠಣಾ ವ್ಯಾಪ್ತಿಗೆ ತಂದು ಹಕ್ಕುಪತ್ರ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 1226 ಮನೆಗಳನ್ನು ಗುರುತಿಸಲಾಗಿದೆ. ರೋಣ ತಾಲೂಕಿನಲ್ಲಿ ಮೇಲ್ಮಠ ನೂತನ ಗ್ರಾಮವನ್ನು ಕಂದಾಯ ಗ್ರಾಮವಾಗಿಸಿ 61 ಮನೆಗಳನ್ನು ಗುರುತಿಸಲಾಗಿದೆ. ಅದೇ ರೀತಿ ಗದಗ ತಾಲೂಕಿನಲ್ಲಿ ಅಡವಿಸೋಮಾಪುರ ಗ್ರಾಮದಿಂದ ಜಲಸಂಖರಿ ನಗರ ವರೆಗೆ 321 ಮನೆಗಳನ್ನು ಗುರುತಿಸಲಾಗಿದೆ. ಲೆ$್ಮಶ್ವರ ತಾಲೂಕಿನಲ್ಲಿ ಬಸಾಪೂರು ನೂತನ ಗ್ರಾಮದಲ್ಲಿ 78 ಮನೆ, ಮುಂಡರಗಿಯಲ್ಲಿ ಹೊಸ ಹೊಂಬಳ, ಸಿಂಗಟರಾಯನ ಕೆರೆ(ಶಿವಾಜಿ ನಗರ), ಕಕ್ಕೂರು (ಆಶಾಕಿರಣ) ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವತಿರ್ಸಿ 134 ಮನೆಗಳನ್ನು ಗುರುತಿಸಲಾಗಿದೆ. ಶಿರಹಟ್ಟಿಯಲ್ಲಿ ಹೊಸಳ್ಳಿ, ಶಿವಾಜಿ ನಗರ, ಸೇವಾನಗರ, ಗುಡ್ಡದಪುರಗಳಲ್ಲಿ 538 ಮನೆ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ನಿಡಗುಂದಿಕೊಪ್ಪ, ಬೈರಾಪುರ ಮತ್ತು ನೆಲ್ಲೂರು ಪ್ಯಾಟಿ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿಸಿ 88 ಮನೆಗಳನ್ನು ಪ್ರಸಕ್ತ ಸಾಲಿನಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ.

ಪ್ರಕ್ರಿಯೆ ಸರಳೀಕರಣ:

ಕಳೆದ 2023ರಲ್ಲಿ ಕೇವಲ ಹಕ್ಕುಪತ್ರ ವಿತರಿಸಲಾಗಿತ್ತು. ಇದರಿಂದಾಗಿ ಹಕ್ಕುಪತ್ರ ಪಡೆದ ಮಾಲೀಕರು ನೋಂದಣಿ, ನೆ ಮತ್ತು ಗ್ರಾಪಂ ನಲ್ಲಿ ಇಸ್ವತ್ತು ಪಡೆಯಲು ಹರಸಾಹಸ ಪಟ್ಟಿದ್ದರು. ಭಾಗಶಃ ಜನರಿಗೆ ಹಕ್ಕುಪತ್ರ ಪಡೆದ ನಂತರ ಆಸ್ತಿ ನೋಂದಣಿಗೆ ಯಾವ ಇಲಾಖೆಗೆ ಅಜಿರ್ ಸಲ್ಲಿಸಬೇಕು ಎಂಬ ಮಾಹಿತಿಯೇ ಇರಲಿಲ್ಲ. ರಾಜ್ಯಾದ್ಯಂತ ಈ ಸಮಸ್ಯೆ ಉಲ್ಭಣಿಸಿ ಆಸ್ತಿ ನೋಂದಣಿಗೆ ಪರದಾಟ ಏರ್ಪಟ್ಟಿತ್ತು. ಈ ಸಮಸ್ಯೆ ಮರುಕಳಿಸದಂತೆ ಎಚ್ಚರಿವಹಿಸಿರುವ ರಾಜ್ಯ ಸರ್ಕಾರ ಈ ಬಾರಿ ನೋಂದಣಿ ಇಲಾಖೆ ಸಹಯೋಗ ಪಡೆದು ಹಕ್ಕುಪತ್ರದ ಜತೆಗೆ ಮನೆಯ ಸ್ವತ್ತಿಗೆ ನೇರವಾಗಿ ಇಸ್ವತ್ತು ದಾಖಲೆ ಸೃಷ್ಟಿಸಿಗೆ ಚಾಲನೆ ನೀಡಿದೆ. ಹಕ್ಕುಪತ್ರ ಪಡೆಯುವ ಅರ್ಹ ಲಾನುಭವಿಯನ್ನು ನೋಂದಣಿ ಕಚೇರಿಗೆ ಕರೆಯಿಸಿ ಆಸ್ತಿ ನೊಂದಣಿ ಮಾಡಿಸಿದ ನಂತರ ಗ್ರಾಪಂ ನಲ್ಲಿ ಸ್ವತ್ತಿನ ಇಸ್ವತ್ತು ಪಡೆಯುವವರೆಗೂ ಮೇಲುಸ್ತುವಾರಿ ವಹಿಸುತ್ತಿದೆ. ಹೀಗಾಗಿ ಅರ್ಹರಿಗೆ ಸ್ವತ್ತಿನ ಸಂರ್ಪೂಣ ಡಿಜಿಟಲೀಕರಣ ದಾಖಲೆಗಳು ಲಭ್ಯವಾಗಲಿವೆ.

ಕಂದಾಯ ಗ್ರಾಮ:

ದಾಖಲೆ ರಹಿತವಾಗಿ ವಾಸಿಸುತ್ತಿರುವ ಜನವಸತಿಗಳಿಗೆ ವಸತಿಯ ದಾಖಲೆ ಸೃಷ್ಟಿ, ಅಂತಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುತ್ತು. ಚುನಾವಣಾ ಪೂರ್ವದಲ್ಲಿ ಹಕ್ಕುಪತ್ರ ವಿತರಣೆ ಮಾಡುವುದಾಗಿ ಕಾಂಗ್ರೆಸ್​ ಸರ್ಕಾರ ಘೋಷಿಸಿತ್ತು. ಅದೇ ರೀತಿ ರಾಜ್ಯಾದ್ಯಂತ ಸಮೀೆ ನಡೆಸಿ ಜನವಸತಿಗಳನ್ನು ಗುರುತಿಸಲಾಗಿತ್ತು. ಜಿಲ್ಲೆಯಲ್ಲಿ 30 ಜನ ವಸತಿ ಗುರುತಿ ಹಕ್ಕುಪತ್ರ ನೀಡಲಾಗುತ್ತಿದೆ. ಮೂಲ ಗ್ರಾಮದಿಂದ 1 ಕಿಮೀ ದೂರ ಇರುವ ವಸತಿ ಪ್ರದೇಶದಲ್ಲಿ 50 ಕುಟುಂಬಗಳಿಗಿಂತ ಹೆಚ್ಚಿಗೆ ಕುಟುಂಬ ವಾಸವಿದ್ದು ಕನಿಷ್ಠ 250 ಜನರು ವಾಸಿಸುತ್ತಿರುವ ಜನವಸತಿಗಳಿಗೆ ಈ ಹಕ್ಕುಪತ್ರ ವಿತರಿಸುವ ನಿಯಮ ಅನ್ವಯವಾಗುತ್ತದೆ.

ಪ್ರಸಕ್ತಸಾಲಿನಲ್ಲಿ ಹಕ್ಕುಪತ್ರ ಪಡೆಯುವ ಅರ್ಹರು:

ತಾಲೂಕು - ನೂತನ ಕಂದಾಯ ಗ್ರಾಮ - ಅರ್ಹ ಮನೆಗಳು

ರೋಣ - ಮೇಲ್ಮಠ - 61

ಗದಗ - ಜಲಶಂಕರಿ ನಗರ - 321

ಲೆ$್ಮಶ್ವರ - ಬಸಾಪೂರ - 78

ಮುಂಡರಗಿ - ಶಿವಾಜಿನಗರ, ಆಶಾಕಿರಣ - 134

ಶಿರಹಟ್ಟಿ - ಹೊಸಳ್ಳಿ, ಶಿವಾಜಿನಗರ, ಸೇವಾ ನಗರ, ಗುಡ್ಡದಪುರ - 538

ಗಜೇಂದ್ರಗಡ - ನಿಡಗುಂದಿಕೊಪ್ಪ, ಬೈರಾಪುರ, ನೆಲ್ಲೂರು ಪ್ಯಾಟಿ - 88

ಕೋಟ್​:

ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ. ಹಲವು ವರ್ಷಳಿಂದ ವಾಸವಿದ್ದು, ಮನೆಯ ಹಕ್ಕುಪತ್ರ ಇಲ್ಲದಿರುವ ಕುಟುಂಬಗಳಿಗೆ ಸ್ವತ್ತಿನ ಮೇಲೆ ಹಕ್ಕು ಸಾಧಿಸಲು ಸರ್ಕಾರ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಜಾರಿ ತಂದಿದೆ. ಈ ಬಾರಿ ನೋಂದಣಿ ಕಾರ್ಯದ ಜತೆಗೆ ಹಕ್ಕುಪತ್ರ ವಿತರಿಸುವ ಕಾರ್ಯ ನಡೆಯುತ್ತಿರುವುದು ವಿಶೇಷ.

 ಸಿ.ಎನ್​. ಶ್ರೀಧರ, ಜಿಲ್ಲಾಧಿಕಾರಿ

ಕೋಟ್​:

ಕಾಂಗ್ರೆಸ್​ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಮೂಲಕ ಪ್ರತಿ ಬಡವರಿಗೂ ಅರ್ಹ ಯೋಜನೆಗಳನ್ನು, ಹಕ್ಕುಗಳನ್ನು ತಲುಪಿಸಲಾಗಿದೆ. ಈಗ ಹಕ್ಕುಪತ್ರ ನೀಡುವ ಮಹತ್ವದ ಕಾರ್ಯ ರಾಜ್ಯದಲ್ಲಿ ಮುಂದುವರಿದಿದೆ. ಬಡ ಮತ್ತು ಹಿಂದೂಳಿದ ಜನರ ಹಕ್ಕುಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವುದೇ ರಾಜ್ಯ ಸರ್ಕಾರದ ಉದ್ದೇಶ.

 ಎಚ್​.ಕೆ. ಪಾಟೀಲ, ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net