ಬೆಂಗಳೂರಿನಲ್ಲಿ ಇಂದಿನಿಂದ ಕೃಷಿ ಕುರಿತು ಜಿ20 ಕಾರ್ಯಾಗಾರ

g20logo
Published on

ಬೆಂಗಳೂರು: ಜಿ-20 ಸಮಾವೇಶದ ಭಾಗವಾಗಿ ಕೃಷಿ ಕುರಿತು ‘ಒಂದು ಆರೋಗ್ಯ: ಅವಕಾಶಗಳು ಮತ್ತು ಸವಾಲುಗಳು’ ವಿಚಾರವಾಗಿ ತಾಂತ್ರಿಕ ಕಾರ್ಯಾಗಾರ ಬೆಂಗಳೂರಿನಲ್ಲಿ ಮಂಗಳವಾರದಿಂದ ಮೂರು ದಿನ ನಡೆಯಲಿದೆ.

ಸಾಮರಸ್ಯದ ಸಹಬಾಳ್ವೆಗಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮಾನವ, ಪ್ರಾಣಿ, ಸಸ್ಯ ಮತ್ತು ಪರಿಸರ ಆರೋಗ್ಯವನ್ನು ಒಳಗೊಂಡ ಒಂದು ಆರೋಗ್ಯದ ಎಲ್ಲ ಸಂಬಂಧಿತ ಅಂಶಗಳನ್ನು ಒಟ್ಟುಗೂಡಿಸುವ ಗುರಿಯನ್ನು ಕಾರ್ಯಾಗಾರ ಹೊಂದಿದೆ.

ಮಾನವ-ಪ್ರಾಣಿ-ಪರಿಸರ ವ್ಯವಸ್ಥೆಯ ಇಂಟರ್ಫೇಸ್, ಉದಯೋನ್ಮುಖ ಹಾಗೂ ಮರು ಉದಯೋನ್ಮುಖ ರೋಗಗಳು, ಗಡಿಯಾಚೆಗಿನ ರೋಗಗಳಂತಹ ವಿವಿಧ ವಿಷಯಾಧಾರಿತ ಕ್ಷೇತ್ರಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಗಡಿಯಾಚೆಗಿನ ಮತ್ತು ಪ್ರಾಣಿಜನ್ಯ ಪ್ರಾಮುಖ್ಯತೆ, ಆಹಾರ ಸುರಕ್ಷತೆ ಮತ್ತು ಸೂಕ್ಷ್ಮಜೀವಿ-ಪ್ರತಿರೋಧ ಮತ್ತು ಜಾಗತಿಕ ಆರೋಗ್ಯಕ್ಕಾಗಿ ಹೊಸ ಕಾರ್ಯತಂತ್ರದ ಸಹಭಾಗಿತ್ವ ವಿಷಯದ ಬಗ್ಗೆ ಪ್ರತಿನಿಧಿಗಳು ತಮ್ಮ ರಾಷ್ಟ್ರಗಳ ಅಭಿಪ್ರಾಯವನ್ನು ಪ್ರಸ್ತಾಪಿಸಲಿದ್ದಾರೆ. ಒನ್ ಹೆಲ್ತ್ನಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ಸೂಕ್ತವಾದ ಪ್ರಮುಖ ನೀತಿ ಶಿಫಾರಸುಗಳೊಂದಿಗೆ ಈ ಕಾರ್ಯಕ್ರಮವು ಕೊನೆಗೊಳ್ಳಲಿದೆ.

ಮೂರು ದಿನಗಳ ಈ ಕಾರ್ಯಾಗಾರವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತವೂ ಸೇರಿದಂತೆ ಜಿ20 ಸದಸ್ಯ ರಾಷ್ಟ್ರಗಳ ಸುಮಾರು 100 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇವರಲ್ಲಿ ಸದಸ್ಯ ರಾಷ್ಟ್ರಗಳ ವಿದೇಶಿ ಪ್ರತಿನಿಧಿಗಳು, ಆಹ್ವಾನಿತ ದೇಶಗಳ ಅತಿಥಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಮುಖರು ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net