ಮೋದಿ ಹೇಳಿದ್ದನ್ನೇ ಪು​ನರುಚ್ಚರಿಸಿದ ಮಾಡಿದ ಜಿ20 ಶೃಂಗ…

g20
Published on

ಬಾಲಿ: ಈ ಹಿಂದೆ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುತಿನ್​ರನ್ನು ಭೇಟಿ ಮಾಡಿದ್ದಾಗ 'ಇದು ಯುದ್ಧದ ಸಮಯ ಅಲ್ಲ' ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಈಗ ಜಿ20 ಶೃಂಗ ಸಭೆಯಲ್ಲಿ ಮೋದಿ ನೀಡಿದ್ದ ಹೇಳಿಕೆಯನ್ನು ಎಲ್ಲಾ ಜಾಗತಿಕ ನಾಯಕರು ಪುನರುಚ್ಚರಿಸಿದ್ದಾರೆ.

ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಅಧಿವೇಶನದ ಕೊನೆಗೆ ಭಾಗವಹಿಸಿದ ಎಲ್ಲಾ ನಾಯಕರು ಒಟ್ಟಾಗಿ ಒಂದು ಹೇಳಿಕೆಯನ್ನು ನೀಡುವುದು ವಾಡಿಕೆ. ಈ ಬಾರಿ ವಿವಿಧ ದೇಶಗಳ ನಾಯಕರು ಹಿಂದೆ ಮೋದಿ ಹೇಳಿದ್ದ 'ಇದು ಯುದ್ಧದ ಸಮಯವಲ್ಲ' ಎಂಬ ಹೇಳಿಕೆಯನ್ನೇ ಮತ್ತೇ ಹೇಳಿದ್ದಾರೆ. ಇದರಿಂದ ಪ್ರಧಾನಿ ಮೋದಿಯ ಪ್ರಭಾವ ಹೆಚ್ಚಾಗಿದ್ದು ಸುಳ್ಳಲ್ಲ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ಶಾಂಘೈ ಶೃಂಗಸಭೆ ನಡೆದಿತ್ತು. ಅಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಪುಟಿನ್‌ಗೆ ಮೋದಿ, 'ಇದು ಯುದ್ಧದ ಸಮಯವಲ್ಲ' ಎಂದು ಸಲಹೆ ನೀಡಿದ್ದರು.

'ಅಂತಾರಾಷ್ಟ್ರೀಯ ಕಾನೂನು, ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆಯನ್ನು ಎತ್ತಿಹಿಡಿಯುವುದು ಅತ್ಯಗತ್ಯ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬೆದರಿಕೆ ಸ್ವೀಕಾರಾರ್ಹವಲ್ಲ. ಯುದ್ಧಕ್ಕೆ ಶಾಂತಿಯುತ ಪರಿಹಾರ ಹುಡುಕುವ ಪ್ರಯತ್ನಕ್ಕೆ ರಾಜತಾಂತ್ರಿಕ ಮಾತುಕತೆ ಅತ್ಯಗತ್ಯ. ಇದು ಯುದ್ಧದ ಸಮಯವಲ್ಲ' ಎಂದು ಜಿ20 ನಾಯಕರು ಹೇಳಿಕೆ ನೀಡಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, 'ಪ್ರಧಾನಿ ಮೋದಿ ಸಂದೇಶ ಎಲ್ಲಾ ದೇಶಗಳ ನಾಯಕರ ಬಾಯಲ್ಲೂ ಪ್ರತಿಧ್ವನಿಸಿದೆ. ಭಾರತ ಮಾತುಕತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ ಈ ಮಾತು ಜಗತ್ತಿನಲ್ಲಿ ಪ್ರತಿಧ್ವನಿಸಿದೆ' ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net