ಫರ್ನೀಚರ್ ಎಕ್ಸ್​ಪೋಗೆ ಭರ್ಜರಿ ಪ್ರತಿಕ್ರಿಯೆ: ನೂರಾರು ಜನರು ಭೇಟಿ, ವಿಜಯವಾಣಿ-ದಿಗ್ವಿಜಯ ನ್ಯೂಸ್ ಸಹಯೋಗ

Funri expo
Published on

ಬೆಂಗಳೂರು: ವೈಪಿಆರ್ ಇವೆಂಟ್ಸ್ ಆಂಡ್ ಎಕ್ಸಿಬಿಷನ್ ಸಂಸ್ಥೆಯು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ ಪ್ಯಾಲೇಸ್ ಗ್ರೌಂಡ್ಸ್​ನಲ್ಲಿ ಆಯೋಜಿಸಿರುವ 4 ದಿನಗಳ ‘ಪೀಠೋಪಕರಣ ಹಾಗೂ ಮನೆ ಒಳಾಂಗಣ ವಿನ್ಯಾಸ ಮೇಳ’ಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಮೊದಲ ದಿನವೇ ಎಕ್ಸ್​ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರಿಗೆ ಹಾಗೂ ರಸ್ತೆ ಸುರಕ್ಷತಾ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ನಟರಾದ ಶಮಂತ್, ಸುದರ್ಶನ್ ಮತ್ತು ನಟಿ ಭೂಮಿಕಾ ಮೇಳವನ್ನು ಉದ್ಘಾಟಿಸಿದರು. ನಂತರ ಮಳಿಗೆಗಳಿಗೆ ಭೇಟಿ ನೀಡಿ ಪೀಠೋಪಕರಣಗಳನ್ನು ವೀಕ್ಷಿಸಿದರು.

ಪ್ರತಿನಿತ್ಯ ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ಉಚಿತವಾಗಿ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಬಹದು. ವಾಹನಗಳ ನಿಲುಗಡೆಗೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಮೇಳ ಅಂಗವಾಗಿ ವಿವಿಧ ಮಾದರಿಯ ಪೀಠೋಪಕರಣಗಳ ಮೇಲೆ ಶೇ.70ವರೆಗೆ ರಿಯಾಯಿತಿ ದೊರೆಯಲಿದೆ. ಸಾರ್ವಜನಿಕರು ತಮ್ಮ ಮನೆಗಳಿಗೆ ಹೊಂದಾಣಿಕೆಯಾಗುವ ಮತ್ತು ವಿನ್ಯಾಸದ ಮೆರುಗು ಹೆಚ್ಚಿಸುವ ಪೀಠೋಪಕರಣಗಳನ್ನು ಖರೀದಿಸಬಹುದು.

ಮನೆಯ ಮಂದಿಗೆಲ್ಲ ಹೊಂದಾಣಿಕೆವಾಗುವ ಫರ್ನೀಚರ್ ಆಯ್ಕೆ ಮಾಡಿಕೊಳ್ಳಲು ಎಕ್ಸ್​ಪೋ ಸೂಕ್ತ ವೇದಿಕೆ. ಮೇಳದಲ್ಲಿ 4-10 ಜನರು ಕುಳಿತು ಕೊಳ್ಳುವ ಮಾದರಿಯಲ್ಲಿ ಸೋಫಾ ಸಿದ್ಧಪಡಿಸಲಾಗಿದೆ. ಕಟ್ಟಿಗೆ, ರಗ್ಜಿನ್, ಲೆದರ್ ಮತ್ತು ಇತರ ವಸ್ತುಗಳನ್ನು ಬಳಸಿ ಸೋಫಾಗಳನ್ನು ತಯಾರಿಸಲಾಗಿದೆ. ಮನೆಗಳ ವಿನ್ಯಾಸ, ಬಣ್ಣ ಹಾಗೂ ಆವರಣಕ್ಕೆ ಒಪು್ಪವ ವಿನ್ಯಾಸದಲ್ಲಿ ಡಿಸೈನ್ ಮಾಡಲಾಗಿದೆ.ಅಜ್ಜಿ-ತಾತ, ಅಪ್ಪ-ಅಮ್ಮ ಮತ್ತು ಮೊಮ್ಮಕ್ಕಳು ಸೇರಿ ಎಲ್ಲರೂ ಕುಳಿತುಕೊಳ್ಳಲು ಅವಕಾಶ ಇರುವ ಸೋಫಾಗಳಿಗೂ ಬೇಡಿಕೆ ಬರಲಾರಂಭಿಸಿದೆ.

ಎಕ್ಸ್​ಪೋದಲ್ಲಿ ಏನೇನಿದೆ?

ಇಟಾಲಿಯನ್ ಡಿಸೈನರ್ ಸೋಫಾ, ಕಚೇರಿಗೆ ಬೇಕಾದ ಪೀಠೋಪಕರಣ, ಕಾರ್ಪೆಟ್, ಬೆಡ್​ರೂಮ್ ಸೆಟ್, ವಾಲ್​ಫ್ರೇಮ್ ಮಸಾಜ್ ಚೇರ್, ಆರಾಮ ದಾಯಕ ಸೋಫಾ, ಡೈನಿಂಗ್ ಸೆಟ್, ಗಾರ್ಡನ್ ಪೀಠೋಪಕರಣ, ಕೃತಕ ಹೂಗಳು, ಅಲಂಕಾರಿಕ ವಸ್ತುಗಳು, ಟೀಕ್​ವುಡ್ ಪೀಠೋಪಕರಣ ಸೇರಿ ಅನೇಕ ಉಪಕರಣಗಳು ಮೇಳದಲ್ಲಿ ಸಿಗಲಿದೆ.

90 ಮಳಿಗೆ

ಪೀಠೋಕರಣಗಳು ಮತ್ತು ಮನೆಯ ಒಳಾಂಗಣ ಉಪಕರಣಗಳು ದೈನಂದಿನ ಅಗತ್ಯದ ವಸ್ತುಗಳಾಗಿವೆ. ಇವುಗಳನ್ನು ಆಯ್ಕೆ ಮಾಡುವಾಗ ಗುಣಮಟ್ಟ, ಬಣ್ಣ, ಶೈಲಿ, ವಿನ್ಯಾಸದ ಹಾಗೂ ಉತ್ತಮ ಬೆಲೆಯನ್ನು ಗಮನಿಸುವುದು ಅಗತ್ಯ. ಸಮಾನ್ಯವಾಗಿ ಹೊರಗಡೆ ಮಳಿಗೆಯಲ್ಲಿ ಫರ್ನೀಚರ್ ಖರೀದಿಗೆ ಮುಂದಾದಲ್ಲಿ, ನಿಗದಿತ ಬೆಲೆಯನ್ನು ನೀಡಬೇಕಾಗುತ್ತದೆ. ಎಷ್ಟೇ ಚೌಕಾಸಿ ಸಾಧ್ಯವಾಗದಿದ್ದರೂ ಕೈಗೆಟುಕುವ ಬೆಲೆಗಳಿಗೆ ಗುಣಮಟ್ಟದ ಪೀಠೋಪಕರಣಗಳು ಸಿಗುವ ಸಾಧ್ಯತೆ ಕಮ್ಮಿ. ಆ ತಾಪತ್ರಯ ಇಲ್ಲಿಲ್ಲ. ಮೇಳದಲ್ಲಿ ಅಂದಾಜು 90 ಮಳಿಗೆಗಳಿದ್ದು, ಒಂದೇ ಸೂರಿನಡಿ ಕೈಗೆಟುಕುವ ದರದಲ್ಲಿ ತಮಗೆ ಬೇಕಾದ ಪೀಠೋಪಕರಣ ಖರೀದಿಸಬಹುದು.

ಮೇಳದಲ್ಲಿ ನಾನು ಸೋಫಾ ಖರೀದಿಸಿದ್ದೇನೆ. ತುಂಬ ಚೆನ್ನಾಗಿದ್ದು, ಗುಣಮಟ್ಟದಿಂದ ಕೂಡಿದೆ. ಒಂದೇ ಸೂರಿನಡಿ ತರಹೇವಾರಿ ಫರ್ನೀಚರ್​ಗಳು ಲಭ್ಯವಿದೆ. ಪ್ರತಿ ಬಾರಿ ಮೇಳಕ್ಕೆ ತಪ್ಪದೆ ಆಗಮಿಸುತ್ತಿರುತ್ತೇನೆ. | ಪಿ.ಎಸ್. ಕರುಣಾಕರ್ ನಾಯಕ ಜ್ಞಾನಭಾರತಿ ಈ ಹಿಂದೆ ಮೂರು ಬಾರಿ ಮೇಳ ಅಭೂತಪೂರ್ವ ಯಶಸ್ಸು ಕಂಡಿದೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ. ಈ ಬಾರಿಯೂ ಹೆಚ್ಚಾಗಿ ವಹಿವಾಟು ನಡೆಯುವ ನಿರೀಕ್ಷೆ ಇದೆ. ಕಾಟ್, ಡೈನಿಂಗ್ ಟೇಬಲ್, ಸೋಫಾ ಸೇರಿ ಹತ್ತಾರು ಬಗೆಯ ಫರ್ನೀಚರ್​ಗಳಿದ್ದು, ರಿಯಾಯಿತಿ ದರದಲ್ಲಿ ಸಿಗಲಿದೆ. | ಮೋಹನ್ ಫರ್ನೀಚರ್ ಮಾರಾಟಗಾರ ಮೇಳದಲ್ಲಿ ಕೇರಳದ ನಿಲಂಬೂರಿನ ಜಂಗಲ್ ಟೀಕ್ ಫರ್ನೀಚರ್​ಗಳಿವೆ. ನೋಡುವುದಕ್ಕೆ ಚೆನ್ನಾಗಿವೆ. ನಮ್ಮಲ್ಲಿ ಅಂದಾಜು 95 ಬಗೆಯ ಪೀಠೋಪಕರಣಗಳಿವೆ. 35 ವರ್ಷದಿಂದ ಫರ್ನೀಚರ್ ಮಾರಾಟ ಮಾಡಿಕೊಂಡು ಬರುತ್ತಿದ್ದೇವೆ. | ಇಬ್ರಾಹಿಂ ಫರ್ನೀಚರ್ ಮಾರಾಟಗಾರ ಮೇಳದಲ್ಲಿ ವಿವಿಧ ವಿನ್ಯಾಸದ ಫರ್ನೀಚರ್​ಗಳಿವೆ. ಒಂದೇ ಸೂರಿನಡಿ ಎಲ್ಲ ಬಗೆಯ ಫರ್ನೀಚರ್​ಗಳು ಸಿಗುವುದರಿಂದ ಸಾರ್ವಜನಿಕರು ತಮಗೆ ಇಷ್ಟವಾದುದನ್ನು ಖರೀದಿಸಲು ಅವಕಾಶ ಸಿಗಲಿದೆ. ಮಾರಾಟಗಾರರಿಗೆ ಹೆಚ್ಚಿನ ವಹಿವಾಟು ನಡೆಯುವ ಜತೆಗೆ ಮೇಳ ಯಶಸ್ವಿಯಾಗಲಿ. | ಎಸ್.ಎನ್. ಸಿದ್ದರಾಮಪ್ಪ ಸಾರಿಗೆ ಹಾಗೂ ರಸ್ತೆ ಸುರಕ್ಷತಾ ಇಲಾಖೆ ಆಯುಕ್ತ ಮೇಳದಲ್ಲಿ ಬಹು ಆಯ್ಕೆಯ, ವಿಶಿಷ್ಟ ವಿನ್ಯಾಸದ ಪೀಠೋಪಕರಣಗಳಿವೆ. ಒಂದೇ ಸೂರಿನಡಿ ಹಲವು ಆಯ್ಕೆಗಳನ್ನು ಖುದ್ದಾಗಿ ಪರಿಶೀಲಿಸಿ ಗ್ರಾಹಕರು ಖರೀದಿಸುವ ಅಪೂರ್ವ ಅವಕಾಶ ಇಲ್ಲಿದೆ. ನನಗಂತೂ ಇಲ್ಲಿನ ಪ್ರತಿಯೊಂದು ಕಲೆಕ್ಷನ್​ಗಳೂ ಇಷ್ಟವಾಗಿವೆ. | ಭೂಮಿಕಾ ನಟಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಒಳ್ಳೆಯ ಎಕ್ಸ್​ಪೋ ಆಯೋಜಿಸಿದೆ. ಕಳೆದ ವಾರವಷ್ಟೇ ನಾನು ಸೋಫಾ ಖರೀದಿಸಿದ್ದೆ. ಮೇಳದಲ್ಲಿ ಗುಣಮಟ್ಟ ಪೀಠೋಪಕರಣಗಳು ನೋಡಿದರೆ ಇಲ್ಲೇ ಖರೀದಿಸಬೇಕಿತ್ತು ಅನ್ನಿಸುತ್ತಿದೆ. ಕೈಗೆಟುಕುವ ದರದಲ್ಲಿ ಫರ್ನೀಚರ್ ದೊರೆಯುತ್ತಿರುವುದು ಖುಷಿಯ ಸಂಗತಿ. | ಸುದರ್ಶನ್ ನಟ ಮೇಳದಲ್ಲಿ ಇರುವ ಕಲೆಕ್ಷನ್ ನೋಡಿದರೆ ನಮ್ಮ ಮನೆಯಲ್ಲಿ ಇರುವ ಎಲ್ಲ ಫರ್ನೀಚರ್​ಗಳನ್ನು ಮಾರಾಟ ಮಾಡಿ ಹೊಸದಾಗಿ ಖರೀದಿಸಬೇಕು ಅನಿಸುತ್ತಿದೆ. ವಿವಿಧ ವಿನ್ಯಾಸ ಪೀಠೋಪಕರಣಗಳು ತುಂಬ ಚೆನ್ನಾಗಿವೆ. ಅಂಗಡಿಗಳಲ್ಲಿ ಕಲೆಕ್ಷನ್​ಗಳು ಕಡಿಮೆ ಆಯ್ಕೆ ಇರುತ್ತದೆ. ಆದರೆ, ಮೇಳದಲ್ಲಿ ನೂರಾರು ಕಲೆಕ್ಷನ್​ಗಳಿವೆ. | ಶಮಂತ್ ನಟ

ಕುಟುಂಬದ ಜತೆ ಬನ್ನಿ ವಾರಾಂತ್ಯದಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆಯಲು ಎಕ್ಸ್​ಪೋಗೆ ಭೇಟಿ ನೀಡಬಹುದು. ಪೀಠೋಪಕರಣಗಳನ್ನು ನೋಡಿ ಇಷ್ಟವಾದಲ್ಲಿ ಖರೀದಿ ಮಾಡಬಹುದು.

ಪತ್ರಿಕೆಯಲ್ಲಿ ಸುದ್ದಿಯನ್ನು ನೋಡಿ ಬಾಣಸವಾಡಿಯಿಂದ ಮೇಳಕ್ಕೆ ಬಂದಿದ್ದೇನೆ. ಸಾಕಷ್ಟು ಕಲೆಕ್ಷನ್​ಗಳಿವೆ. ಇನ್ನೂ ಡಿಸ್ಕೌಂಡ್ ಸಿಗಬೇಕಿತ್ತು. ಸೋಫಾ ಖರೀದಿಸಲು ಆಸಕ್ತಿ ಹೊಂದಿದ್ದೇನೆ. ಒಳ್ಳೆಯ ದರ ಸಿಕ್ಕರೆ ಖರೀದಿಸುತ್ತೇನೆ. | ಸಂಗಮೇಶ್ ಬಾಣಸವಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net