

ಫರ್ನೀಚರ್ ಎಕ್ಸ್‌ಪೋದಲ್ಲಿ ಖರೀದಿಗೆ ನಾಳೇ ಕಡೇ ದಿನ
ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಜಾಲಹಳ್ಳಿಯ ಎಚ್‌ಎಂಟಿ ಆಟದ ಮೈದಾನದಲ್ಲಿ ನಡೆಯುತ್ತಿರುವ ‘ಫರ್ನೀಚರ್ ಆ್ಯಂಡ್ ಲೈಫ್ಸ್ಟೈಲ್ ಎಕ್ಸ್‌ಪೋ’ದಲ್ಲಿ ವಿವಿಧ ಸಾಮಗ್ರಿಗಳನ್ನು ಖರೀದಿಸಲು ಸೋಮವಾರವೇ ಕಡೇ ದಿನವಾಗಿರಲಿದೆ.
ವಾರಾಂತ್ಯವಾದ ಭಾನುವಾರ ಮೇಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿದ್ದರು. ಕೆಲವರು ಕುಟುಂಬ ಸಮೇತ ಆಗಮಿಸಿ ತಮಗೆ ಇಷ್ಟವಾದ ಪೀಠೋಪಕರಣಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಮನೆಗೆ ಕೊಂಡೊಯ್ದರು. ಹಬ್ಬದ ಹಿನ್ನೆಲೆಯಲ್ಲಿ ಗೃಹಿಣಿಯರು ಸೀರೆ ಸೇರಿದಂತೆ ವಿವಿಧ ವಸಗಳು, ಕೈಮಗ್ಗ ಉತ್ಪನ್ನಗಳು, ಅಲಂಕಾರಿಕ ಸಾಮಗ್ರಿಗಳು ಹಾಗೂ ಡ್ರೆಸ್ ಮೆಟಿರೀಯಲ್ಸ್ ಖರೀದಿಸಿದರು.
ಒಂದೇ ಸೂರಿನಡಿ ಗ್ರಾಹಕರಿಗೆ ಲಭ್ಯವಾಗುವ ಉತ್ಪನ್ನಗಳಿಗೆ ಗ್ರಾಹಕರು ಮಾರುಹೋಗಿದ್ದಾರೆ. ಎಕ್ಸ್‌ಪೋಜ್ ಇಂಡಿಯಾ ಇವೆಂಟ್ಸ್ ಆ್ಯಂಡ್ ಎಕ್ಸಿಬಿಷನ್ಸ್ ಸಂಘಟಿಸಿರುವ, ವಿಜಯವಾಣಿ ಸಹಯೋಗದಲ್ಲಿ ಈ ಬೃಹತ್ ಪೀಠೋಪಕರಣ ಮೇಳವು ನಡೆಯುತ್ತಿದೆ. ಎಕ್ಸ್‌ಪೋದಲ್ಲಿ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ವಿವಿಧ ಸಾಮಗ್ರಿಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿವಿಧ ಸಾಮಗ್ರಿಗಳ ಮೇಲೆ ಶೇ.75ರ ವರೆಗೂ ರಿಯಾಯಿತಿ ಘೋಷಿಸಲಾಗಿದೆ.
ವೈವಿಧ್ಯಮಯ ಉತ್ಪನ್ನಗಳು ಲಭ್ಯ:
ಮೇಳದಲ್ಲಿ ಸೋಫಾ ಸೆಟ್, ಆ್ಯಂಟಿಕ್/ಲೆದರ್ ಸೋಫಾ, ಹಾಸಿಗೆ, ಕುಶನ್ಸ್, ಡೈನಿಂಗ್ ಟೇಬಲ್, ಜೂಲಾ, ಗಾರ್ಡನ್ ಫರ್ನೀಚರ್ಸ್, ಅಲಂಕಾರಿಕ ದೀಪಗಳು ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ಇವುಗಳ ಜತೆಗೆ ಕೈಮಗ್ಗದ ಬಟ್ಟೆಗಳು, ಕಾಶ್ಮೀರಿ ಶಾಲುಗಳು, ಖಾದಿ ಬಟ್ಟೆಗಳು, ಕರಕುಶಲ ವಸ್ತುಗಳು, ಮಡಿಕೆಯಿಂದ ತಯಾರಿಸಿರುವ ಕಲಾಕೃತಿಗಳು, ಸಿರಾಮಿಕ್ ವಸ್ತುಗಳು, ನೆಲಹಾಸು, ಬಣ್ಣದ ಚಿತ್ರಪಟಗಳು ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ.
ಎಲ್ಲ ಖರೀದಿಯನ್ನು ಯುಪಿಐ, ಡಿಜಿಟಲ್ ಪಾವತಿ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ಮಾನ್ಯ ಮಾಡಲಾಗುತ್ತದೆ. ಮೇಳಕ್ಕೆ ಆಗಮಿಸುವವರ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಫರ್ನೀಚರ್ ಮೇಳದ ಹೆಚ್ಚಿನ ಮಾಹಿತಿಗೆ ಮೊ: 8296546114/9845010246 ಸಂಪರ್ಕಿಸಬಹುದು.
ಎಕ್ಸ್‌ಪೋ ಎಲ್ಲಿ?:
ಸ್ಥಳ: ಜಾಲಹಳ್ಳಿಯ ಎಚ್‌ಎಂಟಿ ಆಟದ ಮೈದಾನ (ಕದಂಬ ಗಾರ್ಡೇನಿಯಾ ಎದಿರು)
ಸಮಯ: ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 9ರ ವರೆಗೆ
ಪ್ರವೇಶ: ಉಚಿತ ಪ್ರವೇಶ
ಪಾರ್ಕಿಂಗ್: ಉಚಿತ ನಿಲುಗಡೆ ವ್ಯವಸ್ಥೆ ಇದೆ