ಪಾಕಿಸ್ತಾನದಲ್ಲಿ ಮೃತ ಉಗ್ರರ ಅಂತ್ಯಸಂಸ್ಕಾರ: ಪಾಕ್​ ಸೇನೆ ಸೇರಿ ಲಷ್ಕರ್​ ಭಯೋತ್ಪಾದಕರು ಭಾಗಿ!: ವಿಡಿಯೋ ಇಲ್ಲಿದೆ ನೋಡಿ | Dead Terrorists

dk - 2025-05-07T183050.864
Published on

Dead Terrorists : ಇದೇ ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದೆ. ಈ ಕಾರ್ಯಚರಣೆಯಲ್ಲಿ 80ಕ್ಕೂ ಅಧಿಕ ಉಗ್ರರು ಬಲಿಯಾಗಿದ್ದಾರೆ. ಇದೀಗ, ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯ ನಂತರ ಅಂತ್ಯಕ್ರಿಯೆಗಳು ನಡೆಯುತ್ತಿರುವುದನ್ನು ಪಾಕಿಸ್ತಾನ ಮತ್ತು ಪಿಒಕೆ ವೀಡಿಯೊಗಳು ವೈರಲ್​ ಆಗಿವೆ.

ಲಾಹೋರ್ ಬಳಿಯ ಮುರಿಡ್ಕೆಯಲ್ಲಿ ಭಯೋತ್ಪಾದಕ ಸಂಬಂಧಿತ ಸ್ಥಳದ ಮೇಲೆ ಭಾರತೀಯ ಮಿಲಿಟರಿ ದಾಳಿಯಲ್ಲಿ ಸಾವನ್ನಪ್ಪಿದ ಮೂವರು ಉಗ್ರರ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವವನ್ನು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್ ವಹಿಸಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ, ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ, ಪೊಲೀಸರು, ನಾಗರಿಕ ಅಧಿಕಾರಿಗಳು ಮತ್ತು ಹಫೀಜ್ ಸಯೀದ್ ಸ್ಥಾಪಿಸಿದ ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸದಸ್ಯರು ಕೂಡ ಭಾಗವಹಿಸಿದ್ದರು.

ಖಾರಿ ಅಬ್ದುಲ್ ಮಲಿಕ್, ಖಾಲಿದ್ ಮತ್ತು ಮುದಾಸೀರ್ ಎಂಬವರು ಜೆಯುಡಿ ಸದಸ್ಯರಾಗಿದ್ದು, ದಾಳಿಯಲ್ಲಿ ನಾಶವಾದ ಮಸೀದಿಯಲ್ಲಿ ಪ್ರಾರ್ಥನಾ ನಾಯಕರು ಮತ್ತು ಉಸ್ತುವಾರಿ ವಹಿಸುವವರಾಗಿ ಕೆಲಸ ಮಾಡುತ್ತಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಿಒಕೆಯ ಮುವಾಜಫರಾಬಾದ್‌ನ ವೀಡಿಯೊವೊಂದು ಶವಪೆಟ್ಟಿಗೆಯಲ್ಲಿ ಶವವನ್ನು ಸಾಗಿಸುತ್ತಿರುವುದನ್ನು ತೋರಿಸಿದೆ.ಇನ್ನೊಂದು ವೀಡಿಯೊದಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ ಮುರಿಡ್ಕೆಯಲ್ಲಿ ಪಾಕಿಸ್ತಾನ ಧ್ವಜ ಸುತ್ತಿದ ಶವಪೆಟ್ಟಿಗೆಯನ್ನು ಹೊತ್ತೊಯ್ಯುತ್ತಿರುವುದನ್ನು ತೋರಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net