ಮಜಾ - ಸುಖ - ಆನಂದ

1-6830b25b836db
Published on
ಮಜಾ, ಸುಖ, ಆನಂದ - ಈ ಮೂರು ಪದಗಳ ನಡುವೆ ಅನೇಕ ವ್ಯತ್ಯಾಸವಿದೆ. ಆದರೆ ಅನೇಕ ಬಾರಿ ಈ ವ್ಯತ್ಯಾಸವನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ.

ಯುವಕನೊಬ್ಬ120 ಕಿಮಿ ವೇಗದಲ್ಲಿ ದ್ವಿಚಕ್ರ ವಾಹನವನ್ನು ಓಡಿಸುವುದೇ ಆನಂದ ಎಂದು ಹೇಳುತ್ತಿರುತ್ತಾನೆ. ಅದು ಆನಂದವಲ್ಲ, ಮಜಾ. ಆನಂದದ ಒಂದು ಅಂಶವಷ್ಟೇ. ಇತ್ತಿಚಿನ ದಿವಸಗಳಲ್ಲಿ ವಾರದ ಕೊನೆಯಲ್ಲಿ ಅನೇಕ ಯುವಕ-ಯುವತಿಯರು ಮೋಜು-ಮಸ್ತಿಗಳಲ್ಲಿ ನಿರತರಾಗುತ್ತಾರೆ. ಅನೇಕ ಕ್ಲಬ್, ನೈಟ್ ಪಾರ್ಟಿ, ರೆಸಾರ್ಟ್ಗಳಿಗೂ ಹೋಗುತ್ತಾರೆ.

ಇದು ಇಂದ್ರಿಯ ಲೋಲುಪತೆ. ಕ್ಷಣಿಕ ಸುಖವನ್ನು ಕೊಡುತ್ತದೆ ಎನ್ನುವುದರಲ್ಲಿಯಾವುದೇ ಸಂಶಯವಿಲ್ಲ. ಕ್ರಮೇಣ ಈ ಸುಖಗಳಿಗೆ ಅನೇಕರು ದಾಸರಾಗಿಬಿಡುತ್ತೇವೆ. ಭಗವದ್ಗೀತೆ ಹೇಳಿದ ಹಾಗೆ, ಮೊದಲಲ್ಲಿ ಇದು ಅಮೃತದಂತೆ ಕಾಣಿಸುತ್ತದೆ. ನಂತರ ಅದು ವಿಷ ಎಂದು ತಿಳಿಯುತ್ತದೆ. ಆದರೆ ಅಷ್ಟು ಹೊತ್ತಿಗಾಗಲೇ ನಾವು ಅದರ ದಾಸರಾಗಿ ಬಿಟ್ಟಿರುತ್ತೇವೆ. ಆ ವಸ್ತುಗಳಿಲ್ಲದಿದ್ದರೆ, ಅದರಿಂದ ಸಿಗುವ ಸುಖವು ನಮಗೆ ಸಿಗದಿದ್ದರೆ, ನಾವು ಜೀವಿಸಲು ಸಾಧ್ಯವೇ ಇಲ್ಲ ಎಂದು ಆಲೋಚಿಸುತ್ತೇವೆ.

ವಿಷಯ ಸರಪಳಿಯಲ್ಲಿ ಸಿಕ್ಕಿ ನರಳಾಡುತ್ತೇವೆ. ಅದಲ್ಲದೆ ಮೊದಮೊದಲು ಕೇವಲ ಸ್ವಲ್ಪ ಪ್ರಮಾಣವೂ ನಮಗೆ ಆನಂದವನ್ನು ನೀಡಿದರೂ, ನಂತರ ಅದೇ ಅನಂದಕ್ಕೆ ಹೆಚ್ಚಿನ ಪ್ರಮಾಣದ ಭೋಗವಸ್ತು ಅವಶ್ಯವಾಗುತ್ತದೆ. ಇದರಿಂದ ನಮ್ಮ ದೇಹ-ಮನಸ್ಸಿನ ಆರೋಗ್ಯವೂ ನಾಶವಾಗುತ್ತದೆ. ಅದರಿಂದ ನಾವು ಈ ವಿಷಯ ಸರಪಳಿಯಲ್ಲಿ ಸಿಕ್ಕಿಕೊಳ್ಳದೇ ಇರು ವುದು ಶ್ರೇಯಸ್ಕರ. ಸುಖವು ಮಜಾಗಿಂತ ಉತ್ತಮ. ಮಜಾವೂ ಕ್ಷಣಿಕ ಆನಂದವನ್ನು ನೀಡಿದರೆ, ಸುಖವು ಸ್ವಲ್ಪ ಹೆಚ್ಚು ಆನಂದವನ್ನು ನೀಡುತ್ತದೆ. ದೈಹಿಕ, ಮಾನಸಿಕ, ಭಾವನಾತ್ಮಕ ತೃಪ್ತಿಯಿಂದ ಉಂಟಾಗುವ ಆನಂದದ ಭಾಗ.

ಉದ್ಯೋಗ ದೊರೆಯುವುದು, ಅದರಲ್ಲಿ ಕೊಂಚ ಯಶಸ್ಸು, ಹೆಸರು-ಕೀರ್ತಿ ಪಡೆಯುವುದು, ಇತ್ಯಾದಿ. ನಾವು ಇಷ್ಟಪಡುವ ಸಂಬಂಧಗಳನ್ನು ಬೆಳಸಿಕೊಳ್ಳುವುದು. ಆದರೆ ಆ ಆನಂದ ಹೆಚ್ಚು ಕಾಲ ನಿಲ್ಲುವುದಿಲ್ಲ. ಆನಂದದ ಹಿಂದೆ ದುಃಖ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net