ಖಾಕಿ ಬಟ್ಟೆಯಲ್ಲೇ ಫುಲ್ ಟೈಟ್: ವೈನ್ ಶಾಪ್ ಮುಂದೆ ತಲೆಕೆಳಗಾಗಿ ಬಿದ್ದ ಕಾನ್‌ಸ್ಟೇಬಲ್ ಸಸ್ಪೆಂಡ್ | UP policeman drunk

ಯುಪಿಯ ಚಿತ್ರಕೂಟದಲ್ಲಿ ಖಾಕಿಯಲ್ಲೇ ಕಂಠಪೂರ್ತಿ ಕುಡಿದು ಕುರ್ಚಿಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಪೇದೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಲಾಗಿದೆ.
UP policeman drunk
ಖಾಕಿ ಸಮವಸ್ತ್ರದಲ್ಲೇ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಪೊಲೀಸ್
Published on: 
Summary

ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದ ಮದ್ಯದ ಅಮಲಿನ ಘಟನೆ ವೈರಲ್

ಸಮವಸ್ತ್ರದಲ್ಲೇ ವೈನ್ ಶಾಪ್ ಬಳಿ ಕುರ್ಚಿಯ ಮೇಲೆ ತಲೆಕೆಳಗಾಗಿ ಕಾನ್ಸ್‌ಟೇಬಲ್

ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೇದೆ ಅಮಾನತು.

UP policeman suspended: ಉತ್ತರ ಪ್ರದೇಶದಲ್ಲಿ ಪೊಲೀಸ್ ಸಮವಸ್ತ್ರದ ಘನತೆಯನ್ನೇ ಮರೆತು ಮದ್ಯದ ಅಮಲಿನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಪೊಲೀಸ್ ಪೇದೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ಕುರಿತು ಎಸ್‌ಪಿ ಕಠಿಣ ಕ್ರಮ ಕೈಗೊಂಡಿದ್ದಾರೆ.

ಚಿತ್ರಕೂಟ ಜಿಲ್ಲೆಯ ಪೊಲೀಸ್ ಲೈನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ದೀಪಕ್ ಪ್ರಕಾಶ್ ವರ್ಮಾ, ಖಾಕಿ ಸಮವಸ್ತ್ರದಲ್ಲೇ ಮದ್ಯದ ಅಂಗಡಿಯ ಬಳಿ ಕಂಠಪೂರ್ತಿ ಕುಡಿದು ತೂರಾಡಿದ್ದಾರೆ. ಕುಡಿದ ನಶೆಯಲ್ಲಿ ಪ್ರಜ್ಞೆತಪ್ಪಿ ಕುರ್ಚಿಯೊಂದರ ಮೇಲೆ ತಲೆಕೆಳಗಾಗಿ ಬಿದ್ದಿದ್ದ ಈತನ ಬೇಜವಾಬ್ದಾರಿ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾನ್‌ಸ್ಟೇಬಲ್ ಅಮಾನತು ಹಾಗೂ ತನಿಖೆಗೆ ಆದೇಶ

ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಚಿತ್ರಕೂಟದ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕುಮಾರ್ ಸಿಂಗ್ ಅವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆಯ ಬಾಲ್ಕನಿಯಲ್ಲೇ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡಬೇಕಾ? ಈ 5 ಹೂವಿನ ಗಿಡ ಬೆಳೆಸಿ | Balcony Gardening

ಇನ್ನು, ಕರ್ತವ್ಯ ಲೋಪ ಮತ್ತು ಇಲಾಖೆಯ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೇದೆ ದೀಪಕ್ ಪ್ರಕಾಶ್ ವರ್ಮಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspension) ಮಾಡಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಇಲಾಖಾ ತನಿಖೆಗೂ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net