Flowers to Attract Butterflies: ನಿಮ್ಮ ಮನೆ ಬಾಲ್ಕನಿಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದರೆ ನೋಡೋಕೆ ಎಷ್ಟು ಚಂದ ಅಲ್ವಾ? ಇದಕ್ಕಾಗಿ ನಿಮಗೇನು ದೊಡ್ಡ ತೋಟ ಅಥವಾ ವಿಶಾಲವಾದ ಜಾಗ ಬೇಕಾಗಿಲ್ಲ. ನಿಮಗಿರೋ ಸಣ್ಣ ಬಾಲ್ಕನಿಯಲ್ಲೇ ಕೆಲವು ಸೂಕ್ತ ಹೂವಿನ ಗಿಡಗಳನ್ನು ಬೆಳೆಸಿದರೆ ಸಾಕು, ಚಿಟ್ಟೆಗಳು ತಮ್ಮಷ್ಟಕ್ಕೆ ತಾವೇ ನಿಮ್ಮ ಮನೆಗೆ ಹುಡುಕಿಕೊಂಡು ಬರುತ್ತವೆ. ಗಿಡಗಳಿಗೆ ಸರಿಯಾದ ಬಿಸಿಲು, ನೀರು ಮತ್ತು ಕೆಮಿಕಲ್ ಇಲ್ಲದ ಆರೈಕೆ ಮಾಡಿದರೆ ಸಾಕು.
ಹಳದಿ ಮತ್ತು ಆರೆಂಜ್ ಬಣ್ಣದ ಚಂಡೂಹೂವುಗಳು ಬಾಲ್ಕನಿ ಅಂದವನ್ನು ಹೆಚ್ಚಿಸುವುದಲ್ಲದೆ, ಚಿಟ್ಟೆಗಳನ್ನು ಸುಲಭವಾಗಿ ಆಕರ್ಷಿಸುತ್ತವೆ. ಇದನ್ನು ಸರಿಯಾಗಿ ನೀರು ಹರಿದುಹೋಗುವ ಕುಂಡಗಳಲ್ಲಿ (Pots) ನೆಡಬೇಕು. ದಿನಕ್ಕೆ ಕನಿಷ್ಠ ಕೆಲ ಗಂಟೆಗಳ ಕಾಲ ಬಿಸಿಲು ಸಿಗುವಂತೆ ನೋಡಿಕೊಳ್ಳಿ. ಕುಂಡದ ಮೇಲ್ಭಾಗದ ಮಣ್ಣು ಒಣಗಿದಾಗ ಮಾತ್ರ ನೀರು ಹಾಕಿ.
ಕೆಂಪು, ಪಿಂಕ್, ಹಳದಿ ಮತ್ತು ಆರೆಂಜ್ ಬಣ್ಣಗಳಲ್ಲಿ ಅರಳುವ ಜಿನ್ನಿಯಾ ಹೂಗಳು ಬಾಲ್ಕನಿಗೆ ಫ್ರೆಶ್ ಲುಕ್ ನೀಡುತ್ತವೆ. ಇವುಗಳ ಹೂವಿನ ಮಕರಂದ ಚಿಟ್ಟೆಗಳಿಗೆ ತುಂಬಾ ಇಷ್ಟ. ಇವುಗಳನ್ನು ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಇಡಬೇಕು. ಮಣ್ಣಿನಲ್ಲಿ ತೇವಾಂಶವಿರಲಿ, ಆದರೆ ಜಾಸ್ತಿ ನೀರು ಹಾಕಬೇಡಿ. ಒಣಗಿದ ಹೂಗಳನ್ನು ಆಗಾಗ ತೆಗೆಯುತ್ತಿದ್ದರೆ ಹೊಸ ಹೂಗಳು ಚೆನ್ನಾಗಿ ಬಿಡುತ್ತವೆ.
ಗುಂಪು ಗುಂಪಾಗಿ ಸಣ್ಣ ಸಣ್ಣ ಹೂಗಳನ್ನು ಬಿಡುವ ಲಂಟಾನ ಗಿಡಗಳ ಮಕರಂದಕ್ಕೆ ಚಿಟ್ಟೆಗಳು ಬೇಗನೆ ಆಕರ್ಷಿತವಾಗುತ್ತವೆ. ಇದು ಬಿಸಿಲಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೆ, ಸ್ಥಳೀಯ ತಳಿಗಳನ್ನು ಆಯ್ದುಕೊಂಡು ಕುಂಡದಲ್ಲೇ ಬೆಳೆಸುವುದು ಒಳಿತು. ಈ ಗಿಡದಲ್ಲಿ ಬರುವ ಹಣ್ಣುಗಳನ್ನು (Berries) ಮಕ್ಕಳು ಅಥವಾ ಸಾಕುಪ್ರಾಣಿಗಳು ತಿನ್ನದಂತೆ ನೋಡಿಕೊಳ್ಳಿ.
ಈ ಗಿಡಗಳು ಚಿಟ್ಟೆಗಳಿಗೆ ಆಹಾರ ನೀಡುವ ಜೊತೆಗೆ ಅವುಗಳ ಜೀವನಚಕ್ರವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಮೊನಾರ್ಕ್ ಜಾತಿಗೆ ಸೇರಿದ ಚಿಟ್ಟೆಗಳು ಈ ಗಿಡದ ಎಲೆಗಳ ಮೇಲೆ ಮೊಟ್ಟೆಯಿಡುತ್ತವೆ ಮತ್ತು ಅವುಗಳ ಕಾಯಿಗಳು (Caterpillars) ಎಲೆಗಳನ್ನು ತಿಂದು ಬೆಳೆಯುತ್ತವೆ.
ನಕ್ಷತ್ರ ಆಕಾರದ ಸಣ್ಣ ಹೂಗಳನ್ನು ಬಿಡುವ ಪೆಂಟಾಸ್ ಗಿಡಗಳು ಹಲವು ಬಣ್ಣಗಳಲ್ಲಿ ಸಿಗುತ್ತವೆ. ಇವು ಬಾಲ್ಕನಿಯಲ್ಲಿ ಚಿಟ್ಟೆಗಳನ್ನು ಸೆಳೆಯಲು ಬೆಸ್ಟ್. ಇದನ್ನು ಬೇರೆ ಹೂವಿನ ಗಿಡಗಳ ಜೊತೆಯಲ್ಲೂ ಸುಲಭವಾಗಿ ಬೆಳೆಸಬಹುದು.
ಇದನ್ನೂ ಓದಿ: Blackbuck: 'ಹುಲ್ಲುಗಾವಲು ಪಾಳುಭೂಮಿಯಲ್ಲ, ಜೀವಕವಚ!': ಕೃಷ್ಣಮೃಗಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ
ಸರಿಯಾದ ಬಿಸಿಲು: ಗಿಡಗಳಿಗೆ ಸರಿಯಾಗಿ ಸೂರ್ಯನ ಬೆಳಕು ಸಿಗುವಂತೆ ಕುಂಡಗಳನ್ನು ಜೋಡಿಸಿಡಿ.
ಗುಂಪು ಗುಂಪಾಗಿ ಗಿಡ ಇಡಿ: ಹೂವಿನ ಗಿಡಗಳನ್ನು ಒಂದೇ ಕಡೆ ಹತ್ತಿರವಾಗಿ ಇಡುವುದರಿಂದ ಚಿಟ್ಟೆಗಳಿಗೆ ಮಕರಂದ ಹುಡುಕಲು ಸುಲಭವಾಗುತ್ತದೆ.
ತೇವಾಂಶದ ಮರಳು: ಒಂದು ಅಗಲವಾದ ತಟ್ಟೆಯಲ್ಲಿ ಸ್ವಲ್ಪ ಒದ್ದೆಯಾದ ಮರಳನ್ನು ಇಡಿ. ಅಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಮತ್ತು ತಟ್ಟೆಯನ್ನು ಸ್ವಚ್ಛವಾಗಿಡಿ.
ಕ್ರಿಮಿನಾಶಕ ಬೇಡ: ಕೆಮಿಕಲ್ ಇರೋ ಕ್ರಿಮಿನಾಶಕಗಳನ್ನು (Pesticides) ಬಳಸಬೇಡಿ. ಇವು ಚಿಟ್ಟೆಗಳು ಮತ್ತು ಅವುಗಳ ಕಾಯಿಗಳಿಗೆ ಹಾನಿ ಮಾಡುತ್ತವೆ.
ದೈನಂದಿನ ಆರೈಕೆ: ಅಗತ್ಯಕ್ಕೆ ತಕ್ಕಂತೆ ನೀರು ಹಾಕಿ ಹಾಗೂ ಒಣಗಿದ ಹೂಗಳನ್ನು ನಿಯಮಿತವಾಗಿ ತೆಗೆಯುತ್ತಿರಿ.