ಕಾವೇರಿ ಮಾತೆಗೆ ದವನದ ಹುಣ್ಣಿಮೆ ಪೂಜೆ

oppo_0
ಕೊಪ್ಪ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಅರ್ಚಕ ಪುರುಷೋತ್ತಮ ಭಟ್ ಬೆಬಿಂದ್ರ ಪ್ರಸಾದ್ ವಿಜೇಂದ್ರ ಪ್ರಸಾದ್ ರವೀಂದ್ರ ಪ್ರಸಾದ್, ಚಂದ್ರು ಇದ್ದರು.
Published on

ಬೈಲುಕುಪ್ಪೆ:ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿ.ಎಂ.ರಸ್ತೆ ಕಾವೇರಿ ದಡದ ಮೇಲೆ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಲಾಗಿರುವ ಕಾವೇರಮ್ಮನ ಪ್ರತಿಮೆಗೆ 145ನೇ ದವನದ ಹುಣ್ಣಿಮೆ ಪ್ರಯುಕ್ತ ಶನಿವಾರ ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು.

ಸೇವಾರ್ಥದಾರರಾದ ಮೈಸೂರು ನಾರಾಯಣಸ್ವಾಮಿ ಕುಟುಂಬ ವರ್ಗದವರಿಂದ ಸಂಘದ ಅಧ್ಯಕ್ಷ ಬೆಬಿಂದ್ರ ಪ್ರಸಾದ್ ಸಮ್ಮುಖದಲ್ಲಿ ಅರ್ಚಕ ಪುರುಷೋತ್ತಮ ಭಟ್ ದೇವಿಗೆ ಪೂಜೆ ಸಲ್ಲಿಸಿದರು. ನದಿಯಿಂದ ನೀರನ್ನು ತಂದು ಕಾವೇರಮ್ಮನ ಮೂರ್ತಿಯನ್ನು ಸ್ವಚ್ಛಗೊಳಿಸಿ ಎಳನೀರು ಹಾಲು ಜೇನು, ತುಪ್ಪದಿಂದ ನೈವೇದ್ಯ ಮಾಡಿ ಹೊಸ ಸೀರೆ ಮತ್ತು ಕುಪ್ಪಸ ತೊಟ್ಟು ಒಡವೆಗಳನ್ನು ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಎಡೆ ನೈವೇದ್ಯ, ಅಭಿಷೇಕ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು.

ಸಂಘದ ಪದಾಧಿಕಾರಿಗಳಾದ ರವೀಂದ್ರ ಪ್ರಸಾದ್. ವಿಜೇಂದ್ರ ಪ್ರಸಾದ್. ಕುಶಲನಗರದ ರುದ್ರೇಶ್. ಭಕ್ತಾದಿಗಳಾದ ತಿಲಕ್ ಪೂಜಾರಿ, ಕೊಪ್ಪ ಚಂದ್ರು, ಅವರ್ತಿ ಮಂಜು, ಶ್ರೀನಿವಾಸ್, ಪುಟ್ಟರಾಜು, ಬೆಮ್ಮತ್ತಿ ಚಂದ್ರು, ಬೀರೇಗೌಡ, ಮಹಿಳೆಯರು ಪುಟಾಣಿಗಳು ಸೇರಿದಂತೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net