ಕೆಐಒಸಿಎಲ್ ನೌಕರರ ಬೇಡಿಕೆಗಳನ್ನು ತಕ್ಷಣ ಈಡೇರಿಸಿ

ಬಿಎಂಎಸ್ ಸಂಯೋಜಿತ ಕುದ್ರೆಮುಖ್ ಮಜ್ದೂರ್ ಸಂಘದ ವತಿಯಿಂದ ಕೆಐಒಸಿಎಲ್ ನೌಕರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಐಒಸಿಎಲ್ ಮುಖ್ಯ ದ್ವಾರದ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಯಿತು.
ಬಿಎಂಎಸ್ ಸಂಯೋಜಿತ ಕುದ್ರೆಮುಖ್ ಮಜ್ದೂರ್ ಸಂಘದ ವತಿಯಿಂದ ಕೆಐಒಸಿಎಲ್ ನೌಕರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಐಒಸಿಎಲ್ ಮುಖ್ಯ ದ್ವಾರದ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಯಿತು.
Published on
ಮಂಗಳೂರು: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸಂಯೋಜಿತ ಕುದ್ರೆಮುಖ್ ಮಜ್ದೂರ್ ಸಂಘದ ವತಿಯಿಂದ ಕೆಐಒಸಿಎಲ್ ನೌಕರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಐಒಸಿಎಲ್ ಮುಖ್ಯ ದ್ವಾರದ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ತಮ್ಮ ಸಂಘಟನೆಯು ರಾಷ್ಟ್ರ ಹಿತ - ಉದ್ಯಮ ಹಿತ - ಕಾರ್ಮಿಕ ಹಿತ ಎಂಬ ತ್ರಿಸೂತ್ರದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮನವಿ, ಸಂವಾದ ಹಾಗೂ ಕಾರ್ಮಿಕ ಇಲಾಖೆಯ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಗಳಂತಹ ಪ್ರಜಾಪ್ರಭುತ್ವದ ಮಾರ್ಗಗಳನ್ನು ಅನುಸರಿಸಿದರೂ ಆಡಳಿತ ಮಂಡಳಿಯಿಂದ ಸೂಕ್ತ ಸ್ಪಂದನೆ ಸಿಗದ ಕಾರಣವೇ ಧರಣಿ ಹಮ್ಮಿಕೊಳ್ಳಲಾಗಿದೆ. ಆಡಳಿತ ಮಂಡಳಿಯು ನೌಕರರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ, ಬಿಎಂಎಸ್ ನೇತೃತ್ವದಲ್ಲಿ ಜಿಲ್ಲಾ ಕೇಂದ್ರದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದರಲ್ಲದೆ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ, ಕಾರ್ಮಿಕರ ಬೇಡಿಕೆಗಳಿಗೆ ಆಡಳಿತ ಸ್ಪಂದಿಸದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು. ಕುದುರೆಮುಖ್ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ನಿರಂತರ ವಿಳಂಬ ಧೋರಣೆಯ ಹಿನ್ನೆಲೆಯನ್ನು ವಿವರಿಸಿದರೆ, ಅಧ್ಯಕ್ಷ ಸುರೇಶ್ ಕರ್ಕೇರ ಶಾಂತಿಯುತ ಧರಣಿಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನೂರಾರು ಕಾರ್ಮಿಕರು, ವರ್ಗಾವಣೆಗೊಂಡ ನೌಕರರ ಕುಟುಂಬಸ್ಥರು ಹಾಗೂ ಬಿಎಂಎಸ್ ಮುಖಂಡರಾದ ವಿಶ್ವನಾಥ್ ಶೆಟ್ಟಿ, ರೋಹಿತಾಶ್ವ, ಗೋಪಾಲ ಕೃಷ್ಣ, ವಸಂತ ಕುಮಾರ್ ಮನಿಹಳ್ಳ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಭಗವಾನ್ ದಾಸ್ ಕಾರ್ಯಕ್ರಮ ನಿರೂಪಿಸಿದರು.
----------------
ಪ್ರಮುಖ ಬೇಡಿಕೆಗಳ ಮಂಡಣೆ
ಅನ್ಯಾಯದ ವರ್ಗಾವಣೆಗಳನ್ನು ರದ್ದುಪಡಿಸಿ ನೌಕರರನ್ನು ಮರಳಿ ಕರ್ನಾಟಕಕ್ಕೆ ಕರೆತರುವುದು, ಕೆಐಒಸಿಎಲ್ ಅನ್ನು ಎನ್‌ಎಂಡಿಸಿ ಜೊತೆ ವಿಲೀನಗೊಳಿಸುವುದು, ದೇವದಾರಿ ಕ್ಯಾಪ್ಟಿವ್ ಗಣಿ ಯೋಜನೆಯನ್ನು ಆರಂಭಿಸುವುದು, ವೇತನ ಪರಿಷ್ಕರಣೆ ಜಾರಿಯಾಗುವವರೆಗೆ ಮಧ್ಯಂತರ ಪರಿಹಾರ ನೀಡುವುದು, ಖಾಲಿ ಹುದ್ದೆಗಳ ಭರ್ತಿ, ಸಿಬ್ಬಂದಿ ಕಡಿತ ಕೈಬಿಡುವುದು ಹಾಗೂ ಬಡ್ತಿಗಳನ್ನು ಪಾರದರ್ಶಕವಾಗಿ ಜಾರಿಗೊಳಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಮಂಡಿಸಲಾಯಿತು.
----------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net