ಖಾಸಗಿ ಬಂಕ್​ಗಳಲ್ಲೂ ಇಂಧನ ದರ ಏರಿಕೆ

Front 6 Fuel Price
Published on

ಬೆಂಗಳೂರು: ಶೆಲ್ ಪೆಟ್ರೋಲ್ ಬಂಕ್​ಗಳಲ್ಲಿ ಇಂಧನ ದರ ಶತಕದ ಹೊಸ್ತಿಲಲ್ಲಿದೆ. ವಿ ಪವರ್ ಪೆಟ್ರೋಲ್ ಲೀಟರ್​ಗೆ 99.55 ರೂ. ಇದ್ದರೆ, ಸಾಮಾನ್ಯ ಪೆಟ್ರೋಲ್ ಲೀಟರ್​ಗೆ 92.00 ರೂ. ಇದೆ. ವಿ ಪವರ್ ಡೀಸೆಲ್ ಲೀಟರ್​ಗೆ 88.50 ರೂ. ಇದ್ದರೆ ಸಾಮಾನ್ಯ ಡೀಸೆಲ್ ಲೀಟರ್​ಗೆ 79.50 ರೂ.ಇದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಬಂಕ್​ಗಳ ದರಕ್ಕೆ ಹೋಲಿಸಿದರೆ ಪ್ರತಿ ಲೀಟರ್​ಗೆ ವಿ ಪವರ್ ಪೆಟ್ರೋಲ್ ದರ 13.04 ರೂ., ಸಾಮಾನ್ಯ ಪೆಟ್ರೋಲ್ ದರ 5.49 ರೂ., ವಿ ಪವರ್ ಡೀಸೆಲ್ ದರ 10.19 ರೂ. ಹಾಗೂ ಸಾಮಾನ್ಯ ಡೀಸೆಲ್ ದರ 1.19 ರೂ. ಹೆಚ್ಚಿದೆ. ಇಂಡಿಯನ್ ಆಯಿಲ್​ನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 86.51 ರೂ. ಹಾಗೂ ಡೀಸೆಲ್​ಗೆ 78.31 ರೂ.ಇದೆ. ಭಾರತ್ ಪೆಟ್ರೋಲಿಯಂ ಕಂಪನಿಯ ಬಂಕ್​ಗಳಲ್ಲಿ ಪೆಟ್ರೋಲ್​ಗೆ 86.47 ರೂ. ಹಾಗೂ ಡೀಸೆಲ್​ಗೆ 78.27 ರೂ.ಇದೆ. ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್​ಗಳಲ್ಲಿ ಇರುವ ಇಂಧನ ದರವೂ ಐಒಸಿ ಹೊಲಿಸಿದರೆ 4-5 ಪೈಸೆ ಕಡಿಮೆ ಇದೆ. ಖಾಸಗಿ ಸಂಸ್ಥೆಗಳ ನಾಯರಾ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ದರ 86.75 ರೂ. ಹಾಗೂ ಡೀಸೆಲ್ ದರ 78.30 ರೂ. ಇದೆ. ಎಸ್ಸಾರ್ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್​ಗೆ 86.76 ರೂ. ಹಾಗೂ ಡೀಸೆಲ್​ಗೆ 76.32 ರೂ. ಇದೆ. ಸರ್ಕಾರಿ ಸ್ವಾಮ್ಯದ ಬಂಕ್​ಗಳಲ್ಲಿ 15 ದಿನದಿಂದೀಚೆಗೆ ಪೆಟ್ರೋಲ್ ಹಾಗೂ ಇಂಧರ ದರ ಸ್ಥಿರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net