ತಾಯಿಯ ಎದುರೇ ಮಗುವಿನ ಶಿರಚ್ಛೇದ: ಆರೋಪಿಯನ್ನ ನಡುರಸ್ತೆಯಲ್ಲೇ ಹೊಡೆದು ಕೊಂದ ಸ್ಥಳೀಯರು! | Killed

Untitled design - 2025-09-27T194107.952
Published on

Killed: ಮಾನಸಿಕ ಅಸ್ವಸ್ಥ ಎಂದು ಹೇಳಲ್ಪಟ್ಟ ವ್ಯಕ್ತಿಯೊಬ್ಬ, ತಾಯಿಯ ಎದುರೇ ಆಕೆಯ 5 ವರ್ಷದ ಮಗನನ್ನು ಶಿರಚ್ಛೇದ ಮಾಡಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮಹೇಶ್ (25) ಬೈಕ್‌ನಲ್ಲಿ ಬಂದು ನಿವಾಸಿ ಕಾಲ್ ಸಿಂಗ್ ಎಂಬುವವರ ಅವರ ಮನೆಗೆ ಏಕಾಏಕಿ ಪ್ರವೇಶಿಸಿದ್ದಾನೆ. ಕುಟುಂಬವು ಅವನನ್ನು ಇದುವರೆಗೆ ನೋಡಿರಲಿಲ್ಲ. ಯಾವುದೇ ಮಾತು ಆಡದೆ, ಮಹೇಶ್ ಇದ್ದಕ್ಕಿದ್ದಂತೆ ಮನೆಯಲ್ಲಿ ಬಿದ್ದಿದ್ದ ಹರಿತವಾದ ಗುದ್ದಲಿಯನ್ನು ಎತ್ತಿಕೊಂಡು ಹುಡುಗನ ಮೇಲೆ ಹಲ್ಲೆ ನಡೆಸಿ, ಮಗುವಿನ ಕುತ್ತಿಗೆಯನ್ನು ಮುಂಡದಿಂದ ಬೇರ್ಪಡಿಸಿದ್ದಾನೆ ಎಂದು ವರದಿಯಾಗಿದೆ.

ಆರೋಪಿಯನ್ನ ಕೊಂದ ಹಳ್ಳಿಗರು!

ಕಣ್ಣಾರೆ ಹಲ್ಲೆ ಕಂಡ ಮಗವಿನ ತಾಯಿ ಗಟ್ಟಿಯಾಗಿ ಚಿರಾಡಿದ್ದಾಳೆ. ಆಕೆಯ ಧ್ವನಿ ಕೇಳಿದ ಅಕ್ಕಪಕ್ಕದ ಮನೆಯವರು ಧಾವಿಸಿ ಆರೋಪಿಯನ್ನು ಹಿಡಿದಿದ್ದಾರೆ. ಇನ್ನು ಈ ಹಳ್ಳಿಯಾದ್ಯಂತ ಪ್ರತಿಧ್ವನಿಸಿತು. ಹಳ್ಳಿಯಲ್ಲಿನ ಜನರು ಆರೋಪಿಯನ್ನು ಹಿಡಿದು ಕೊಂದಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.

ಮಹೇಶ್(ಮೃತ ಆರೋಪಿ) ಅಲಿರಾಜ್‌ಪುರ ಜಿಲ್ಲೆಯ ಜೋಬತ್ ಬಾಗ್ಡಿ ನಿವಾಸಿ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಮತ್ತು ಕಳೆದ ಮೂರು ನಾಲ್ಕು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದರು ಎಂದು ಅವರ ಕುಟುಂಬ ಪೊಲೀಸರಿಗೆ ತಿಳಿಸಿದೆ.ಇದೀಗ ಪ್ರಕರಣ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net