ನ.22ರಿಂದ ಕುಪ್ಪಳಿಯಲ್ಲಿ ವಿಚಾರ ಕಮ್ಮಟ ಆಯೋಜನೆ

kuvempu kuppali
Published on

ಬೆಂಗಳೂರು: ಡಾ. ಬೆಸರಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಸಮಕಾಲೀನ ಸಾಮಾಜಿಕ ವಿಚಾರಗಳ ಕುರಿತು 3 ದಿನಗಳ ‘ವಿಚಾರ ಕಮ್ಮಟ’ ಸಂವಾದ ಕಾರ್ಯಾಗಾರ ಭಾಷಾತಜ್ಞ ಡಾ. ಕೆ.ವಿ.ನಾರಾಯಣ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ನ.22ರಿಂದ ಮೂರು ದಿನ ರಾಷ್ಟ್ರಕವಿ ಕುವೆಂಪು ಹುಟ್ಟೂರು ಕುಪ್ಪಳಿಯಲ್ಲಿ ನಿಗದಿಯಾಗಿದೆ.

ಈ ಕಮ್ಮಟದಲ್ಲಿ ಸಾಮಾಜಿಕ ಚಿಂತನೆಗಳಲ್ಲಿ ಆಸಕ್ತಿಯಿರುವ 25-55 ವಯೋಮಾನದವರು ಭಾಗವಹಿಸಬಹುದು. ಆಯ್ಕೆಯಾದ ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಇರಲಿದ್ದು ಯಾವುದೇ ಶುಲ್ಕವಿರುವುದಿಲ್ಲ. ಆಸಕ್ತರು ತಮ್ಮ ಪೂರ್ಣ ವಿವರ, ವಿಳಾಸದೊಂದಿಗೆ ಅಧ್ಯಕ್ಷರು, ಡಾ.ಬೆಸರಗರಹಳ್ಳಿ ರಾಮಣ್ಣ ಟ್ರಸ್ಟ್, ನಂ.15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ, ಉಲ್ಲಾಳ ಆರ್‌ಟಿಒ ಕಚೇರಿ ಬಳಿ, ಬೆಂಗಳೂರು 91 ಇವರಿಗೆ ಅ.5ರೊಳಗೆ ಕಳುಹಿಸಲು ಕೋರಿದೆ.

ಹೆಚ್ಚಿನ ಮಾಹಿತಿಗೆ ಮೊ: 9980305837 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net