Frog Chutney : ನೀವೂ ಕಪ್ಪೆ ಚಟ್ನಿ ಮಾಡಲು ಟ್ರೈ ಮಾಡಿದ್ದೀರಾ? ವಿಡಿಯೋ ನೋಡಿ...

frog chutney
Published on

ನವದೆಹಲಿ:  ತೆಂಗಿನಕಾಯಿ, ಕಡಲೆಕಾಯಿ ಮತ್ತು ಟೊಮೆಟೊಗಳಂತಹ ವಿವಿಧ ಚಟ್ನಿಗಳನ್ನು ರುಚಿಕರವಾಗಿ ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರೂ ಒಣಗಿದ ಕಪ್ಪೆ ಚಟ್ನಿಯನ್ನು ಮಾಡಲು ಪ್ರಯತ್ನಿಸಿದ್ದೀರಾ? ಈ ಡ್ರೈ ಫ್ರಾಗ್ ರೆಸಿಪಿ ( frog chutney ) ತಯಾರಿಸುತ್ತೀರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ವಿಡಿಯೋದಲ್ಲಿ ಏನಿದೆ?:  ಒಣ ಕಪ್ಪೆ ಚಟ್ನಿ ಎಂಬುದು ಮಣಿಪುರದ ಸಾಂಪ್ರದಾಯಿಕ ಖಾದ್ಯವಾಗಿದ್ದು ಇದನ್ನು ಒಣಗಿದ ಕಪ್ಪೆಗಳಿಂದ ತಯಾರಿಸಲಾಗುತ್ತದೆ. ಈ ಸಾಂಪ್ರದಾಯಿಕ ಚಟ್ನಿಯನ್ನು ಒಣ ಕಪ್ಪೆ, ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಪುದೀನಾ ಸೊಪ್ಪಿನ ಪುಡಿಯನ್ನು ಸೇರಿಸಿ ತಯಾರಿಸಲಾಗುತ್ತದೆ.

ಒಣ ಮೀನಿನ ಚಟ್ನಿಯಂತೆ ಈ ಒಣ ಕಪ್ಪೆ ಚಟ್ನಿಯನ್ನೂ ಮಣಿಪುರದ ಜನರು ಅನ್ನದೊಂದಿಗೆ ಸವಿಯುತ್ತಾರೆ. ಈ ರೆಸಿಪಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾರದ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 11.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇತರರು ತಿನ್ನುವ ಆಹಾರವನ್ನು ಯಾರೂ ದ್ವೇಷಿಸಬಾರದು,  ಕಪ್ಪೆ ತಿನ್ನುವುದು ಸುರಕ್ಷಿತವೇ?"ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net