

ಬೆಂಗಳೂರು: ಯಾವುದೇ ನೀರಿಕ್ಷೆ ಇಲ್ಲದೆ ಇರುವ ಕಾಳಜಿ, ಪ್ರೀತಿಯೇ ಶುದ್ಧವಾದ ಸ್ನೇಹ. ಆಗಸ್ಟ್ ಮೊದಲ ಭಾನುವಾರದಂದು (ಆಗಸ್ಟ್ 6) ಈ ದಿನವನ್ನು ಆಚರಿಸಲಾಗುತ್ತದೆ. ʼಸ್ನೇಹದ ಮೂಲಕ ಮಾನವ ಚೈತನ್ಯವನ್ನು ಹಂಚಿಕೊಳ್ಳಿʼ ಎಂದು 2023ರ ಸ್ನೇಹಿತರ ದಿನದ ಥೀಮ್ ಆಗಿದೆ. ಸ್ನೇಹಿತರ ದಿನಾಚರಣೆ ವ್ಯಕ್ತಿಗಳ ನಡುವೆ ಅರ್ಥಪೂರ್ಣ ಸಂಪರ್ಕ ಮತ್ತು ಸೌಹಾರ್ದತೆ ಬೆಳಸುವ ಉದ್ದೇಶವನ್ನು ಹೊಂದಿದೆ. ನಿಮ್ಮ ಉತ್ತಮ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕವಾಗಿ ಈ ದಿನ ಆಚರಣೆ ಪ್ರಾರಂಭಿಸಿ...
"ನನಗಿಂತ ಮಿಗಿಲಾದ, ನನ್ನ ಜೀವವಾಗಿರುವ ನಿನ್ನಂತಹ ಸ್ನೇಹಿತನನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು.
ಅಂತರಾಷ್ಟ್ರೀಯ ಸ್ನೇಹಿತರ ದಿನದ ಶುಭಾಶಯಗಳು:
* ನಾನು ಹೊಂದಿರುವ ಅತ್ಯಂತ ಅಮೂಲ್ಯವಾದ ವಿಷಯವೆಂದರೆ ನಿಮ್ಮ ಸ್ನೇಹ. ನಾನು ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತೇನೆ. ಸ್ನೇಹಿತರ ದಿನದ ಶುಭಾಶಯಗಳು ಬೆಸ್ಟಿ.
* ನಿಮ್ಮಂತಹ ಸ್ನೇಹಿತರು ಇರುವಾಗ ಯಾವ ಸಂಪತ್ತು ಬೇಕಾಗಿಲ್ಲ. ನಾನು ಬಯಸುವ ಅತ್ಯಂತ ಅದ್ಭುತ ಸ್ನೇಹಿತ ನೀನು. ನಾನು ನಿಮಗೆ ಸ್ನೇಹ ದಿನದ ಶುಭಾಶಯಗಳನ್ನು ಕೋರುತ್ತೇನೆ.
* ಆತ್ಮೀಯ ಸ್ನೇಹಿತ, ನನಗೆ ನಿಮ್ಮ ಸ್ನೇಹ ಸಿಕ್ಕಿದ್ದಕ್ಕೆ ಧನ್ಯವಾದಗಳು. ಸ್ನೇಹಿತರ ದಿನದ ಶುಭಾಶಯಗಳು!
* ಆತ್ಮೀಯ ಸ್ನೇಹಿತ, ನೀವು ನನ್ನ ಜೀವನದಲ್ಲಿ ಬಂದಾಗಿನಿಂದ, ನೀವು ನನ್ನ ಜೀವನಕ್ಕೆ ಸಂಪೂರ್ಣ ಸಂತೋಷ ತುಂಬಿದ್ದೀರಿ! ನಿಮಗೆ ಸ್ನೇಹಿತರ ದಿನದ ಶುಭಾಶಯಗಳು!
* ನನಗೆ ಬಹಳಷ್ಟು ಸ್ನೇಹಿತರಿರಬಹುದು...ಆದರೆ ನನ್ನ ಹೃದಯ ಮತ್ತು ಆತ್ಮಕ್ಕೆ ಹತ್ತಿರವಾಗಿರುವವರು ನೀನೊಬ್ಬನೇ ಮತ್ತು ಈ ಜಗತ್ತಿನಲ್ಲಿ ನಾನು ಯಾವಾಗಲೂ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ.....ಸ್ನೇಹ ದಿನದ ಶುಭಾಶಯಗಳನ್ನು ಅತ್ಯಂತ ಅದ್ಭುತ ಸ್ನೇಹಿತನಿಗೆ ಕಳುಹಿಸುತ್ತಿದ್ದೇನೆ. ಸ್ನೇಹಿತರ ದಿನದ ಶುಭಾಶಯಗಳು ಬೆಸ್ಟಿ.
ಸ್ನೇಹಿತರ ದಿನ ಆಚರಣೆಗೆ ಸಲಹೆ: ನಿಮ್ಮ ಉತ್ತಮ ಸ್ನೇಹಿತರ ಸಂಬಂಧವನ್ನು ನೆನಪಿಟ್ಟುಕೊಳ್ಳಲು ಸೂಕ್ತ ಸಮಯ. ಅವರನ್ನು ಊಟಕ್ಕೆ ಕರೆದುಕೊಂಡು ಹೋಗುವುದರ ಮೂಲಕ, ಅವರೊಂದಿಗೆ ಸಮಯ ಕಳೆಯುವ ಮೂಲಕ, ಪಾನೀಯಗಳನ್ನು ಸೇವಿಸುತ್ತಾ ಇಂದು, ಒಬ್ಬರಿಗೊಬ್ಬರು ಸ್ವಲ್ಪ ಸಮಯವನ್ನು ಮೀಸಲಿ ಹಾಗೂ ಸಾಧ್ಯವಾದರೆ ನಿಮ್ಮ ಸ್ನೇಹಿತರ ಜತೆಗೆ ಉಡುಗೊರೆಯನ್ನು ಬದಲಿಸಿಕೊಳ್ಳಿ. ನೀವು ಮೊದಲು ಭೇಟಿಯಾದಾಗ ನೀವು ಮಾಡಿದ ತಮಾಷೆಯನ್ನು ನೆನಪಿಸಿಕೊಳ್ಳುವ ಮೂಲಕ ಈ ದಿನವನ್ನು ಆಚರಿಸಿ.