

ಬೆಂಗಳೂರು: ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಬ್ಯಾನರ್ನಲ್ಲಿ ಸಿದ್ಧವಾದ ಫ್ರೆಂಚ್ ಬಿರಿಯಾನಿ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಗೊತ್ತಿರುವ ವಿಚಾರ, ಇದೀಗ ಇದೇ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಕಳೆದ ತಿಂಗಳೇ ಜುಲೈನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದ ಪುನೀತ್, ಇದೀಗ ಟ್ರೇಲರ್ ಬಿಡುಗಡೆ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ದಾನಿಶ್ ಸೇಠ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಫ್ರೆಂಚ್ ಬಿರಿಯಾನಿ ಕಾಮಿಡಿ ಕಥಾಹಂದರವುಳ್ಳ ಸಿನಿಮಾ. ಇದೀಗ ಇದೇ ಚಿತ್ರದ ಟ್ರೇಲರ್ ಜು. 16ರಂದು ಬಿಡುಗಡೆ ಆಗಲಿದೆ. ಜು. 24ಕ್ಕೆ ಅಮೆಜಾನ್ ಪ್ರೈಂನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಪನ್ನಗಾ ಭರಣ ನಿರ್ದೇಶನದಲ್ಲಿ ಚಿತ್ರ ಸಿದ್ಧವಾಗಿದೆ.
ಗುರುದತ್ ಎ ತಲ್ವಾರ್ ಎಂಬುವವರು ಚಿತ್ರದ ನಿರ್ಮಾಣದಲ್ಲಿ ಸಾಥ್ ನೀಡಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಅವಿನಾಶ್ ಬಳೆಕ್ಕಲ್ಲ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕಾರ್ತಿಕ್ ಛಾಯಾಗ್ರಹಣ ನಿಭಾಯಿಸಿದ್ದಾರೆ. ದಿಶಾ ಮದನ್, ನಾಗಭೂಷಣ್, ಶ್ರೀನಿವಾಸಮೂರ್ತಿ, ರಂಗಾಯಣ ರಘು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.