ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಸಹಿ

5-688127a679ab7
Published on

ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (ಯುಕೆ) ಗುರುವಾರ ಲಂಡನ್​ನಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಮ್ಮುಖದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟಿಷ್ ಸಚಿವ ಜೊನಾಥನ್ ರೆನಾಲ್ಡ್ ್ಸ ಈ

ಒಪ್ಪಂದಕ್ಕೆ ಸಹಿ ಹಾಕ ಲಿದ್ದಾರೆ. ಸಹಿ ಬಳಿಕ ಇದಕ್ಕೆ ಬ್ರಿಟಿಷ್ ಸಂಸತ್ತಿನ ಅನುಮೋದನೆ ಅಗತ್ಯ. ಚರ್ಮ, ಪಾದರಕ್ಷೆಗಳು, ಬಟ್ಟೆ ಮುಂತಾದ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ರಫ್ತು ಮಾಡಲು ಇದರಿಂದ ಸಾಧ್ಯವಾಗಲಿದೆ. ಬ್ರಿಟನ್​ನಿಂದ ವಿಸ್ಕಿ, ಕಾರುಗಳ ಆಮದು ದರ ಕಡಿಮೆಯಾಗಲಿದೆ. 2030ರ ವೇಳೆಗೆ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು 120 ಶತಕೋಟಿ ಡಾಲರ್​ಗೆ ತಲುಪಿಸುವ ಗುರಿಯನ್ನು ಇದು ಹೊಂದಿದೆ.

ಯಾರ್ಯಾರಿಗೆ ಲಾಭ?

ಈ ಒಪ್ಪಂದದಡಿ ಭಾರತದ ಶೇ. 99ರಷ್ಟು ರಫ್ತುಗಳು ಯುಕೆ ಮಾರುಕಟ್ಟೆಯಲ್ಲಿ ಶೂನ್ಯ ಸುಂಕದ ಲಾಭ ಪಡೆಯಲಿವೆ. ಬ್ರಿಟಿಷ್ ವಿಸ್ಕಿ, ಜಿನ್, ಆಟೋಮೋಟಿವ್, ಕಾಸ್ಮೆಟಿಕ್ಸ್, ಏರೋಸ್ಪೇಸ್, ವೈದ್ಯಕೀಯ ಉಪಕರಣಗಳು, ಸಾಲ್ಮನ್, ವಿದ್ಯುತ್ ಯಂತ್ರಾಂಶ, ಸಾಫ್ಟ್ ಡ್ರಿಂಕ್ಸ್, ಚಾಕೊಲೇಟ್, ಬಿಸ್ಕೆಟ್ ಮುಂತಾದ ಸರಕುಗಳ ಮೇಲಿನ ಸುಂಕ ಕಡಿಮೆಯಾಗಲಿದೆ. ಜವಳಿ, ಸಮುದ್ರ ಉತ್ಪನ್ನ, ಚರ್ಮ, ಪಾದರಕ್ಷೆ, ಕ್ರೀಡಾ ಸಾಮಗ್ರಿ, ಆಟಿಕೆ, ರತ್ನ ಆಭರಣ, ಇಂಜಿನಿಯರಿಂಗ್ ಸರಕು, ಆಟೋ ಬಿಡಿಭಾಗ, ಇಂಜಿನ್, ಸಾವಯವ ರಾಸಾಯನಿಕ ಮುಂತಾದ ವಲಯಗಳಿಗೂ ರಫ್ತು ಅವಕಾಶ ಸಿಗಲಿದೆ. ಯೋಗ ಬೋಧಕರು, ಸಂಗೀತಗಾರರು, ಶೆಫ್​ಗಳಂತಹ ಸ್ವತಂತ್ರ ವೃತ್ತಿಪರರಿಗೂ ಲಾಭವಾಗಲಿದೆ.

4 ದಿನಗಳ ವಿದೇಶ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಲ್ಕು ದಿನಗಳ ಯುನೈಟೆಡ್ ಕಿಂಗ್​ಡಮ್ ಮತ್ತು ಮಾಲ್ಡೀವ್ಸ್ ಭೇಟಿಗೆ ಬುಧವಾರ ತೆರಳಿದ್ದಾರೆ. ಮೋದಿ ತಮ್ಮ ಪ್ರವಾಸದ ಮೊದಲ ಹಂತದಲ್ಲಿ ಯುನೈಟೆಡ್ ಕಿಂಗ್​ಡಮ್ೆ ತೆರಳಿದ್ದು ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಭೇಟಿಯಾಗಿ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ರ್ಚಚಿಸಲಿದ್ದಾರೆ. ಬ್ರಿಟನ್ ಭೇಟಿ ಬಳಿಕ ಮಾಲ್ಡೀವ್ಸ್​ಗೆ ತೆರಳಲಿರುವ ಮೋದಿ ಮಾಲ್ಡೀವ್ಸ್​ನ

60ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝುು ಆಹ್ವಾನದ ಮೇರೆಗೆ ಮೋದಿ ಮಾಲ್ಡೀವ್ಸ್​ಗೆ ತೆರಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net