

ಗಂಗೊಳ್ಳಿ: ಉಚಿತವಾಗಿ ಹೊಲಿಗೆ ಕಲಿಯಲು ಕುಂದಾಪುರದ ಗೆಳೆಯರ ಬಳಗ ಸ್ವಾವಲಂಬನ ಕೇಂದ್ರ ಅವಕಾಶ ನೀಡುತ್ತಿದ್ದು, ಬಳಿಕ ಅರ್ಹ ಆಸಕ್ತರಿಗೆ ಹೊಲಿಗೆ ಯಂತ್ರ ನೀಡಲಾಗುತ್ತದೆ.
ಕೇಂದ್ರ ಇದುವರೆಗೆ ಉಚಿತ ಪ್ರಾಥಮಿಕ ಹೊಲಿಗೆ ತರಬೇತಿ ನೀಡುತ್ತಿದೆ. ಜತೆಗೆ ಕೇಂದ್ರದಲ್ಲಿ ಹಲವು ವಿನ್ಯಾಸಗಳಲ್ಲಿ ಬಟ್ಟೆಯ ಚೀಲ ಹೊಲಿಯಲು ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ಕುಂದಾಪುರ ಬಸ್ ನಿಲ್ದಾಣ ಸಮೀಪದ ರಮಾನಂದ ಭಟ್ ಕಾಂಪೌಂಡ್‌ಗೆ ಆಗಮಿಸಿ ವಿವರ ಪಡೆದುಕೊಳ್ಳಬಹುದು. ಮಾಹಿತಿಗೆ ಮೊಬೈಲ್ ಸಂಖ್ಯೆ 9224102053ಗೆ ಸಂಪರ್ಕಿಸಬಹುದು ಎಂದು ಕೇಂದ್ರದ ಸ್ಥಾಪಕ ವೆಂಕಟೇಶ ಪೈ ತಿಳಿಸಿದ್ದಾರೆ.