ಉಚಿತ ಪ್ರಯಾಣಕ್ಕೆ ಚಾಲನೆ ನೀಡಿ ತಾವೇ ಬಸ್ ಚಲಾಯಿಸಿದ ಸ್ವಾಮೀಜಿ; ಸುಮಾರು 5 ಕಿ.ಮೀ. ಸಂಚಾರ!

Bus Swamiji
Published on

ವಿಜಯಪುರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಇಂದು ಜಾರಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲವರು ಕಂಡಕ್ಟರ್​-ಡ್ರೈವರ್ ಆಗಿದ್ದೂ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಡಕ್ಟರ್ ರೀತಿ ತಾವೇ ಟಿಕೆಟ್ ಕೊಟ್ಟು ಯೋಜನೆಗೆ ಚಾಲನೆ ನೀಡಿದ್ದರು. ಅದೇ ರೀತಿ ಸಚಿವ ಈಶ್ವರ್ ಖಂಡ್ರೆ ಕೂಡ ನಿರ್ವಾಹಕರಂತೆ ಟಿಕೆಟ್ ನೀಡಿದ್ದರು. ಮತ್ತೊಂದೆಡೆ ಕೆಜಿಎಫ್ ಶಾಸಕಿ ರೂಪಕಲಾ ಬಸ್ಸನ್ನೇ ಚಲಾಯಿಸಿದ್ದರು.

ಮತ್ತೊಂದೆಡೆ ಸ್ವಾಮೀಜಿಯೊಬ್ಬರು ಕೂಡ ಈ ಯೋಜನೆಯ ಚಾಲನೆ ಸಂದರ್ಭದಲ್ಲಿ ತಾವೇ ಸರ್ಕಾರಿ ಬಸ್ ಚಲಾಯಿಸಿದ ಪ್ರಕರಣ ನಡೆದಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೊಲ್ಹಾರದ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ಸ್ವಾಮೀಜಿ ಬಸ್ ಚಲಾಯಿಸಿದವರು.

ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದ ಇವರು, ಅಧಿಕಾರಿಗಳ ಸಮ್ಮುಖದಲ್ಲಿ ತಾವೇ ಕೊಲ್ಹಾರ ಪಟ್ಟಣವನ್ನು ಸುತ್ತಾಡಿಸಿದ್ದಾರೆ. ಸ್ವಾಮೀಜಿ ಸುಮಾರು 5 ಕಿ.ಮೀ. ದೂರ ಬಸ್ ಚಲಾಯಿಸಿದ್ದು, ಬಸ್​ನಲ್ಲಿದ್ದವರು ಕೆಲಕಾಲ ಆತಂಕದಲ್ಲಿ ಇದ್ದಿದ್ದೂ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net