ಆರೋಗ್ಯ ಉಚಿತ ತಪಾಸಣಾ ಶಿಬಿರ

22-MAY-GPT-1
Published on

ಗುಂಡ್ಲುಪೇಟೆ: ಪಟ್ಟಣದ ಶ್ರೀ ರಾಘವೇಂದ್ರ ಬೃಂದಾವನದ ಆವರಣದಲ್ಲಿ ಗುರುವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.

ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯ ಸಹಕಾರದಲ್ಲಿ ನಡೆದ ಶಿಬಿರದಲ್ಲಿ ಪಟ್ಟಣ ಹಾಗೂ ತಾಲೂಕಿನ ನಾನಾ ಗ್ರಾಮಗಳ 250ಕ್ಕೂ ಹೆಚ್ಚಿನ ರೋಗಿಗಳ ಸಾಮಾನ್ಯ ರೋಗಗಳು, ಮೂಳೆ, ಕೀಲು, ನರರೋಗಗಳು, ದಂತ ಚಿಕಿತ್ಸೆ ಸೇರಿದಂತೆ ಆರೋಗ್ಯ ತಪಾಸಣೆಗೊಳಪಟ್ಟರು. ಮಕ್ಕಳು ಸಹ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಉಚಿತವಾಗಿ ಔಷಧಗಳನ್ನು ವಿತರಣೆ ಮಾಡಲಾಯಿತು. ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯ ಡಾ.ವಿಕ್ರಂ ಮಾಹಿತಿ ನೀಡಿದರು.

ತಜ್ಞ ವೈದ್ಯರಾದ ಡಾ.ಚೈತ್ರಾ, ಡಾ.ಹೇಮಲತಾ, ಡಾ.ಯಾದವ್ ಕುಮಾರ್, ಶ್ರೀ ರಾಘವೇಂದ್ರ ಬೃಂದಾವನ ಆಡಳಿತ ಮಂಡಳಿಯ ಶ್ರೀನಿವಾಸ್, ರಾಜೇಶ್ವರಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net