ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

12-KGL-6,
ಕೊಳ್ಳೇಗಾಲದದ ಭೀಮನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ವ್ಯೆದ್ಯರ ಬಳಗದ ವತಿಯಿಂದ ಶನಿವಾರ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಡಾ.ಬಸವರಾಜು, ಶ್ರೀಧರ್, ಡಾ.ರಾಜಶೇಖರ್, ಎ.ಡಿ.ಕುಮಾರಕೃಷ್ಣ, ನಟರಾಜ್ ಮಾಳಿಗೆ, ಚಿಕ್ಕಮಾಳಿಗೆ ಇದ್ದರು.
Published on

ಕೊಳ್ಳೇಗಾಲ: ಪಟ್ಟಣದ ಭೀಮನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಭೀಮನಗರದ ವ್ಯೆದ್ಯರ ಬಳಗದ ವತಿಯಿಂದ ಶನಿವಾರ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವ್ಯೆದ್ಯ ಡಾ.ಬಸವರಾಜು ಮಾತನಾಡಿ, ಇಂದು ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿದೆ. ನೂರಾರು ಜನರು ಆರೋಗ್ಯ ತಪಾಸಣೆಗೆ ಒಳಪಟ್ಟು ಸೌಲಭ್ಯ ಪಡೆದಿದ್ದಾರೆ. ವಿಶೇಷವಾಗಿ ಕೊಳ್ಳೇಗಾಲದ ವಿವಿಧ ಗ್ರಾಮಗಳ ಜನರು, ಟೌನ್ ವ್ಯಾಪ್ತಿಯ ಬಡಾವಣೆ ನಿವಾಸಿಗಳು ಮತ್ತು ಹೆಚ್ಚಾಗಿ ಭೀಮನಗರದ ಜನತೆ ರಕ್ತದಾನವನ್ನು ಅಧಿಕ ಸಂಖ್ಯೆಯಲ್ಲಿ ಮಾಡಿದ್ದಾರೆ. ಮುಂದಿನ ವರ್ಷದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಮಾಜಿಕ ಕಾರ್ಯಗಳನ್ನು ರೂಪಿಸಲಾಗುತ್ತದೆ ಎಂದರು.

100 ದಾನಿಗಳಿಂದ ರಕ್ತದಾನ:

ರಕ್ತದಾನ ಶಿಬಿರಕ್ಕೆ ಉತ್ಪಮ ಸ್ಪಂದನೆ ದೊರೆಯಿತು. ಬೆಳಗ್ಗೆ 9ರಿಂದ 2 ಗಂಟೆಯವರೆಗೆ ನಿಗದಿಗೊಂಡಿದ್ದ ಶಿಬಿರ 4.30 ಗಂಟೆವರವಿಗೂ ವಿಸ್ತರಣೆಗೊಂಡಿತು. 100 ದಾನಿಗಳು ಉತ್ಸಾಹದಿಂದ ರಕ್ತದಾನ ಮಾಡಿದರು. ಈ ವೇಳೆ ಭೀಮನಗರದ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಭೀಮನಗರದ ವ್ಯೆದ್ಯ ಬಳಗದ ಡಾ.ಶ್ರೀಧರ್, ಶಾಶ್ವತ್, ಚಾಮರಾಜನಗರ ರಕ್ತನಿಧಿ ಕೇಂದ್ರದ ಸಿಬ್ಬಂದಿ ಮಾದೇಶ್, ಸೌಮ್ಯಾ, ಹರೀಶ್, ಸತ್ಯ, ಮೋಹನ್, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ನರ್ಸ್‌ಗಳಾದ ತೇಜಸ್ವಿ, ನಿಂಗಮ್ಮ, ಶಶಿಕಲಾ, ಮಂಗಳಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿ ಸಂಚಾಲಕರಾದ ಚಿಕ್ಕಮಾಳಿಗೆ, ಎಲ್.ಲಿಂಗರಾಜು, ವರದರಾಜು, ಎಸ್.ಆನಂದಮೂರ್ತಿ, ಸನತ್‌ಕುಮಾರ್, ಸಿದ್ಧಾರ್ಥ, ನಟರಾಜ್ ಮಾಳಿಗೆ, ಪಾಪಣ್ಣ, ಕೆ.ಕೆ.ಮೂರ್ತಿ, ಎಂ.ನಟರಾಜು, ಪಿ.ಮಲ್ಲಿಕಾರ್ಜುನ, ಪುಟ್ಟಬುದ್ಧಿ, ಸಿ.ನಾಗರಾಜು, ನಿಂಪು ರಾಜೇಶ್, ಶಿವರಾಳ, ಎಸ್.ದಿಲೀಪ್, ಎಸ್.ಸಿದ್ದಪ್ಪಾಜಿ, ಶಂಕರ್, ಕಿರಣ್, ದೇವಾನಂದ್, ರವಿ, ಜಯಶಂಕರ್, ಡಾ.ಗುರುಮೂರ್ತಿ, ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಜಗದೀಶ್ ಶಾಸ್ತ್ರೀ ಹಾಗೂ ಪದಾಧಿಕಾರಿಗಳು ಮತ್ತು ಮುಖಂಡರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net