

ರಾಣೆಬೆನ್ನೂರ: ಇಲ್ಲಿಯ ಲಯನ್ಸ್ ಕ್ಲಬ್, ಶಿವಮೊಗ್ಗ ಕಂಚಿಕಾಮಕೋಟಿ ಮೆಡಿಕಲ್ಸ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಡಿ. 14ರಂದು ಬೆಳಗ್ಗೆ 9 ಗಂಟೆಗೆ ನಗರದ ಲಯನ್ಸ್ ಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವು ಜರುಗಲಿದೆ.
ಶಿಬಿರಕ್ಕೆ ಬರುವವರು ಕಡ್ಡಾಯವಾಗಿ 2 ಫೋಟೋ ಹಾಗೂ ಆಧಾರ್ ಕಾರ್ಡ್ನ ಝೆರಾಕ್ಸ್ 2 ಪ್ರತಿ ತರಬೇಕು ಎಂದು ಕ್ಲಬ್ನ ಪ್ರಕಟಣೆ ತಿಳಿಸಿದೆ.