

ಶಿವಮೊಗ್ಗ: ನಗರದಲ್ಲಿ ಮೊದಲ ಬಾರಿಗೆ ಸರ್ಜಿ ೌಂಡೇಶನ್ ಸಹಯೋಗದಲ್ಲಿ ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್ ಅನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತವಾಗಿ ನೀಡಲಾಗುವುದು ಎಂದು ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಶಿವಮೊಗ್ಗ ಶಾಖೆ ಅಧ್ಯಕ್ಷ ಮಿಥುನ್ ಉತ್ತರಕರ್ ತಿಳಿಸಿದರು.
ಮೃತದೇಹವನ್ನು ಕೊನೆ ಕ್ಷಣದಲ್ಲಿ ನೋಡಬೇಕೆಂಬ ಆಸೆ ದೂರದ ಊರುಗಳಲ್ಲಿರುವ ಅವರ ಕುಟುಂಬಸ್ಥರಿಗೆ ಇರುತ್ತದೆ. ಮೃತರ ಸಂಬಂಧಿಕರು, ಮಕ್ಕಳು ವಿದೇಶ ಅಥವಾ ಬೇರೆ ರಾಜ್ಯಗಳಲ್ಲಿದ್ದರೆ ಬರುವುದು ತಡವಾಗುತ್ತದೆ. ಮೃತಪಟ್ಟ ನಂತರ ದೇಹವು ಕ್ರಮೇಣ ವಾಸನೆ ಬರುವುದನ್ನು ತಡೆಗಟ್ಟಲು ಫ್ರೀಜರ್ ಬಾಕ್ಸ್ ಸಹಕಾರಿ ಆಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂತ್ಯಕ್ರಿಯೆ ವಿಳಂಬವಾದಾಗ ಫ್ರೀಜರ್ ಬಾಕ್ಸ್ ಪೂರಕವಾಗಲಿದ್ದು, 24ರಿಂದ 48 ಗಂಟೆವರೆಗೆ ಇಡಬಹುದು. ನಮ್ಮ ಸಂಸ್ಥೆಯು ಹಲವು ಸಾಮಾಜಿಕ ಕಾರ್ಯಕ್ರಮ ನಡೆಸುತ್ತಿದೆ. ಅದರ ಭಾಗವಾಗಿ ಮೃತದೇಹ ಶೀತಲೀಕರಣ ಬಾಕ್ಸ್‌ನ್ನು ಸರ್ಜಿ ಫೌಂಡೇಶನ್‌ಗೆ ಹಸ್ತಾಂತರ ಮಾಡಿದ್ದೇವೆ ಎಂದರು.
ಸರ್ಜಿ ೌಂಡೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಮಾತನಾಡಿ, ಸರ್ಜಿ ಆಸ್ಪತ್ರೆಯ ಮೂಲಕ ಇದರ ಸಂಪೂರ್ಣ ನಿರ್ವಹಣೆಯನ್ನು ಮಾಡಲಾಗುತ್ತದೆ. ಯಾವುದೇ ಜಾತಿ-ಧರ್ಮಕ್ಕೆ ಇದು ಸೀಮಿತವಲ್ಲ. ಎಲ್ಲ ವರ್ಗದ ಜನರಿಗೆ ಉಚಿತವಾಗಿ ಲಭ್ಯ. ಡೆಡ್ ಬಾಡಿ ಪ್ರೀಜರ್‌ನ್ನು ತೆಗೆದುಕೊಂಡು ಹೋಗುವ ಸಾರಿಗೆ ವೆಚ್ಚವನ್ನು ಬಳಕೆದಾರರೇ ಭರಿಸಬೇಕಾಗುತ್ತದೆ. ಇದಕ್ಕೆ ಅತ್ಯಂತ ಕಡಿಮೆ ದರ ನಿಗದಿ ಮಾಡಲಾಗುತ್ತದೆ. ವಾಹನದ ಜವಾಬ್ದಾರಿ ಮೃತರ ಕುಟುಂಬದವರದ್ದಾಗಿರುತ್ತದೆ. ಅಂತ್ಯಕ್ರಿಯೆ ನಂತರ ಫ್ರೀಜರ್ ಬಾಕ್ಸ್ ಮರಳಿಸಿದ ನಂತರ ಸ್ವಚ್ಛತೆ ಮಾಡಿಕೊಂಡು ನಿರ್ವಹಣೆ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಲಾಗುತ್ತದೆ. ಹೆಚ್ಚಿನ ವಿವರಕ್ಕೆ ಮೊಬೈಲ್(8884356688)ಗೆ ಸಂಪರ್ಕಿಸಬಹುದು ಎಂದರು.
ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ವಾದಿರಾಜ್ ಕುಲಕರ್ಣಿ, ಡಾ. ಸತೀಶ್, ಡಾ. ಚಂದ್ರಶೇಖರ್, ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಯಶವಂತ್ ಅಂಬೋರೆ, ಪದಾಧಿಕಾರಿಗಳಾದ ವೆಂಕಟೇಶ್, ಪ್ರದೀಪ್, ಸಾವನ್, ವಿಜಯ್, ಚಂದನ್, ಕಾರ್ತಿಕ್ ಇದ್ದರು.