ಸ್ಪರ್ಧಾತ್ಮಕ ಪರೀಕ್ಷೆಗೆ ಜಾಲಪ್ಪ ಅಕಾಡೆಮಿಯಿಂದ ಉಚಿತ ತರಬೇತಿ

coaching
Published on

ಬೆಂಗಳೂರು: ಕೆಎಎಸ್, ಎಫ್ ಡಿಎ, ಎಸ್‌ಡಿಎ ಮತ್ತು ಪಿಎಸ್‌ಐ ಸೇರಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವೀಧರ ಬಡ ಮತ್ತು ಗ್ರಾಮೀಣ ಯುವಕ/ಯುವತಿಯರಿಗೆ ಆರ್.ಎಲ್. ಜಾಲಪ್ಪ ಅಕಾಡೆಮಿಯು ಉಚಿತ ತರಬೇತಿ ನೀಡುತ್ತಿದೆ.

ನೆಲಮಂಗಲದಿಂದ 15 ಕಿಮೀ ದೂರದಲ್ಲಿರುವ ಸೋಲೂರಿನ ಅಕಾಡೆಮಿಯಲ್ಲಿ ೆಬ್ರವರಿಯಿಂದ 4 ತಿಂಗಳ ತರಬೇತಿ ನೀಡಲಿದೆ.

ಆಸಕ್ತರು www.rljacademy.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9900606042, 9731480759 ಸಂಪರ್ಕಿಸಬಹುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ ಎಂದು ಅಕಾಡೆಮಿಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net