ಎಮ್ಮೆ ಕೊಡುವುದಾಗಿ 4.5 ಲಕ್ಷ ರೂ. ಪಡೆದು ಪರಾರಿ! ಜೋಗಿ ಪ್ರೇಮ್​ಗೆ ಮೋಸ..Prem

Prem
Published on

Prem :  ಖ್ಯಾತ ಚಿತ್ರ ನಿರ್ದೇಶಕ ( Prem) ಪ್ರೇಮ್ ಅವರಿಗೆ ಹೈನುಗಾರಿಕೆಗಾಗಿ ಎಮ್ಮೆ ಕೊಡಿಸುವುದಾಗಿ 4.5 ಲಕ್ಷ ರೂಪಾಯಿ ಪಡೆದು ವ್ಯಕ್ತಿಯೊಬ್ಬ ವಂಚನೆ ಮಾಡಿದ್ದಾನೆ. ಸದ್ಯ ಈ ಸಂಬಂಧ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಮೂಲಕ ದೂರು ದಾಖಲು ಮಾಡಿದ್ದಾರೆ.

ಹೈನುಗಾರಿಕೆ ಮಾಡಲು ಎರಡು ಎಮ್ಮೆ ಖರೀದಿ ಮಾಡಬೇಕು ಎಂದು ಪ್ರೇಮ್​​ ಅವರು ಗುಜರಾತ್ ಮೂಲದ ವನರಾಜ್ ಭಾಯ್ ಎನ್ನುವರ ಜೊತೆ ಮಾತನಾಡಿದ್ದರು. ಇದಕ್ಕಾಗಿ ಮುಂಡಗವಾಗಿ 25 ಸಾವಿರ ಹಣ ನೀಡಿದ್ದರು.

ಇದಾದ ಮೇಲೆ ವಾಟ್ಸ್​ಪ್ ಮೂಲಕ ಎರಡು ಎಮ್ಮೆಗಳ ವಿಡಿಯೋಗಳನ್ನು ವಂಚಕ ಕಳಿಸಿದ್ದನು. ವಿಡಿಯೋ ನೋಡಿದ ಮೇಲೆ ಎಮ್ಮೆಗಳು ಬರುತ್ತವೆ ಎಂದು ಪ್ರೇಮ್ ಅವರು 4.5 ಲಕ್ಷ ರೂಪಾಯಿಗಳನ್ನು ನೀಡಿದ್ದರು.

ಜೋಗಿ ಪ್ರೇಮ್​ಗೆ ವಂಚನೆ

ಒಂದು ವಾರದಲ್ಲಿ ಎಮ್ಮೆ ತಂದು ಕೊಡುತ್ತೇನೆ ಎಂದವನು ದುಡ್ಡು ತೆಗೆದುಕೊಂಡನು. ವಂಚಕನು ಎಮ್ಮೆಗಳನ್ನು ನೀಡದೇ, ಅತ್ತ ಹಣವನ್ನು ವಾಪಸ್ ನೀಡದೇ ಎಸ್ಕೇಪ್ ಆಗಿದ್ದಾನೆ.

ಈ ಆರೋಪದ ಮೇಲೆ ಗುಜರಾತ್ ಮೂಲದ ವನರಾಜ್ ಭಾಯ್ ಎಂಬಾತನ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮ್ ಅವರ ಮ್ಯಾನೇಜರ್ ಕಂ ನಟ ದಶಾವರ ಚಂದ್ರು ಅವರು ದೂರು ನೀಡಿದ್ದಾರೆ. ಪ್ರೇಮ್ ಅವರು ಮದ್ದೂರು ಬಳಿಯ ಬೆಸಗರಹಳ್ಳಿಯಲ್ಲಿ ಹತ್ತು ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿ, ಅದಕ್ಕೆ ‘ಅಮ್ಮನ ತೋಟ’ ಎಂದು ಹೆಸರಿಟ್ಟಿದ್ದಾರೆ. ಗುಜರಾತ್‌ ಎಮ್ಮೆಯನ್ನು ಖರೀದಿಸಿ ಅದನ್ನು ಅಮ್ಮನ ತೋಟದಲ್ಲಿ ಸಾಕುವ ಇರಾದೆ ಹೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net