

ದೇಶದಲ್ಲಿ ಬ್ಯಾಂಕುಗಳಿಗೆ ಹಣಕಾಸು ವಂಚನೆ ಎಸಗುವ ಪ್ರಕರಣ ಶೇ. 51 ಇಳಿಕೆ ಕಂಡಿದೆ. ಕಳೆದ ಮಾ. 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ 40,295 ಕೋಟಿ ರೂ. ವಂಚನೆ ದಾಖಲಾಗಿದೆ ಎಂದು ಆರ್ಬಿಐ ಅಂಕಿ&ಅಂಶ ತಿಳಿಸಿದೆ. ಇದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ ದೇಶದ 12 ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು 81,921 ಕೋಟಿ ರೂ. ವಂಚನೆ ಅನುಭವಿಸಿದ್ದವು.
ಹಣಕಾಸು ವಂಚನೆಯ ಮೊತ್ತದಲ್ಲಿ ಇಳಿಕೆ ಆಗಿದ್ದರೂ, ಒಟ್ಟು ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಂಡು ಬಂದಿಲ್ಲ. 2020&21ರಲ್ಲಿ ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ 9933 ವಂಚನೆ ಪ್ರಕರಣ ದಾಖಲಾಗಿತ್ತು. 2022ರ ಸಾಲಿನಲ್ಲಿ ಇದು 7940 ಆಗಿದೆ.
2022 ಸಾಲಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 9528.95 ಕೋಟಿ ರೂ. ಮೊತ್ತದ ವಂಚನೆ ನಡೆದಿದ್ದು, ಇದು ಇತರ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಗರಿಷ್ಠ ಮೊತ್ತವಾಗಿದೆ. ಒಟ್ಟು 431 ಪ್ರಕರಣ ದಾಖಲಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನಲ್ಲಿ 6932.37 ಕೋಟಿ ರೂ. ವಂಚನೆ ನಡೆದಿದ್ದು, 4192 ಪ್ರಕರಣ ಪತ್ತೆಯಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ, ವಂಚನೆಯ ಮೊತ್ತ ಕಡಿಮೆಯಾಗಿದೆ.