ಗೃಹ ಇಲಾಖೆ ಮಹಿಳಾ ಅಧಿಕಾರಿಗೆ ವಂಚನೆ; ಸೈಬರ್ ಖದೀಮ ಬೀಸಿದ ಗಾಳ ಏನು..!

Cyber Crime
Published on

ಬೆಂಗಳೂರು: ಶಾಪಿಂಗ್ ಮಾಡಿದ್ದ ನಿಮಗೆ ಗ್‌ಟಿ ವೋಚರ್ ಬಂದಿದೆ ಎಂದು ನಂಬಿಸಿ ವಿಧಾನಸೌಧ ಮಹಿಳಾ ಉದ್ಯೋಗಿಗೆ ಸೈಬರ್ ವಂಚಕರು 34 ಸಾವಿರ ರೂ. ವಂಚನೆ ಮಾಡಿದ್ದಾರೆ.

ವಿಧಾನಸೌಧ ಗೃಹ ಇಲಾಖೆ 37 ವರ್ಷದ ಮಹಿಳಾ ಅಧಿಕಾರಿ ವಂಚನೆಗೆ ಒಳಗಾಗಿರುವುದು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆ.14ರಂದು ಮಹಿಳಾ ಅಧಿಕಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನೀವು ಶಾಪಿಂಗ್ ಮಾಡಿದ್ದ ಕಾರಣ ನಿಮ್ಮ ಮೊಬೈಲ್ ನಂಬರ್‌ಗೆ 5 ಗ್‌ಟಿ ವೋಚರ್ ಬಂದಿವೆ. ಉಡುಗೋರೆ ಪಡೆಯಲು 5 ಸಾವಿರ ರೂ. ಪಾವತಿ ಮಾಡಿದರೆ 43 ಇಂಚಿನ ಸ್ಮಾರ್ಟ್ ಟಿವಿ ಕೊಡುವುದಾಗಿ ಭರವಸೆ ನೀಡಿ ಮನೆ ವಿಳಾಸ ಪಡೆದಿದ್ದ. ಇದನ್ನೇ ನಂಬಿದ ಅಧಿಕಾರಿ, 5 ಸಾವಿರ ರೂ.ಅನ್ನು ಆತನ ಖಾತೆಗೆ ಜಮೆ ಮಾಡಿದ್ದರು.

ಇದಾದ ಮೇಲೆ ಜಿಎಸ್‌ಟಿ ಕಟ್ಟಬೇಕು ಎಂದು ಹೇಳಿ 11,999 ರೂ. ಅನ್ನು ಮತ್ತೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಕೊನೆಗೆ ಹೆಚ್ಚುವರಿ ಹಣವನ್ನು ರಿಂಡ್ ಮಾಡುವುದಾಗಿ ನಂಬಿಸಿ ಬ್ಯಾಂಕ್ ಮಾಹಿತಿ ಪಡೆದು ಮತ್ತೆ 16,988 ರೂ.ಗೆ ಕನ್ನ ಹಾಕಿದ್ದರು. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಮಹಿಳಾ ಅಧಿಕಾರಿ, ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net