ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ, ಮೂವರ ಸೆರೆ

arrest-696x465.jpg
Published on

ಬೆಂಗಳೂರು: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ನಕಲಿ ತಾಮ್ರದ ಪಾತ್ರೆ ತೋರಿಸಿ ವಂಚನೆ ಮಾಡುತ್ತಿದ್ದ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ ೬೯.೭೯ ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಪಂಜಾಬ್ ಮೂಲದ ಸನ್ನಿಗಿಲ್,ತಮಿಳುನಾಡಿನ ಅಬ್ಬುಲ್ ಮತ್ತು ಬೆಂಗಳೂರು ನಗರದ ನಿವಾಸಿ ಶಿವಶಂಕರ್ ಬಂಧಿತರು. ಆರೋಪಿಗಳು, ಜಯನಗರ ೬ನೇ ಬ್ಲಾಕ್ ಯಡಿಯೂರು ಕೆರೆ ಬಳಿ ರೈಸ್ ಪುಲ್ಲಿಂಗ್ ಪಾತ್ರೆಯ ಮಾರಾಟದ ವ್ಯವಹಾರವನ್ನು ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ಹೋಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ರೈಸ್ ಪುಲ್ಲಿಂಗ್ ಸಂಬಂಧಿಸಿದಂತೆ ಹಳೆಯ ತಾಮ್ರದ ಪಾತ್ರೆ ಹಾಗೂ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ೫ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net