

ಶಿರಾಳಕೊಪ್ಪ: ಈ ಭಾಗದ ಕೃಷಿ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ಎಫ್‌ಪಿಒ (ಕೃಷಿ ಉತ್ಪಾದನಾ ಸಂಸ್ಥೆ)ಕಚೇರಿಯನ್ನು ಆರಂಭಿಸಲಾಗಿದೆ. ಈ ಹೊಸ ಆರಂಭವು ಗ್ರಾಮೀಣ ಕೃಷಿ ಆಧಾರಿತ ಚಟುವಟಿಕೆಗಳಿಗೆ ಪೂರಕವಾಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್‌ಕುಮಾರ ಹರ್ತಿ ಹೇಳಿದರು.
ಪಟ್ಟಣದಲ್ಲಿ ಶಿವಮೊಗ್ಗ ಬಂಜಾರ ಎ್ಪಿಒ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಎ್ಪಿಒಗಳು ರೈತರ ಆದಾಯ ದ್ವಿಗುಣಗೊಳಿಸಲು ಪೂರಕವಾಗಲಿವೆ. ರೈತರು ತಮ್ಮ ಉತ್ಪನ್ನಗಳನ್ನು ಬೆಳೆಯಲು ಹಾಗೂ ಮಾರಾಟ ಮಾಡಲು ನೆರವು ಪಡೆಯಬಹುದು ಎಂದರು.
ಜಿಲ್ಲಾ ಎ್ಪಿಒಗಳ ಒಕ್ಕೂಟದ ಅಧ್ಯಕ್ಷ ಅನುಪ್ ಹಿರೇಜಂಬೂರು ಮಾತನಾಡಿ, ಎ್ಪಿಒ ಮೂಲಕ ವಿವಿಧ ತರಕಾರಿ, ಧಾನ್ಯ ಮತ್ತು ಪಡಿತರ ಬೆಳೆಗಳ ಒಟ್ಟಾರೆ ಮಾರಾಟ ವ್ಯವಸ್ಥೆ ಸುಧಾರಣೆ ಹೊಂದುವ ನಿರೀಕ್ಷೆ ಇದೆ. ಯುವ ರೈತರು ಮತ್ತು ಮಹಿಳಾ ಗುಂಪುಗಳು ಕೂಡ ಎ್ಪಿಒನಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
ಎಫ್‌ಪಿಒ ವ್ಯವಸ್ಥಾಪಕರಾದ ಸವಿತಾಬಾಯಿ ಶಿವಕುಮಾರ, ಎಸ್‌ಬಿಐ ಮ್ಯಾನೇಜರ್ ವರತಪ್ಪ ಸಂಪಿಗಾಂ, ನಿರ್ದೇಶಕರು ಇದ್ದರು.